ದೇವರ ಪೂಜೆಯಲ್ಲಿ ಪತ್ರೆಗಳ ಪಾತ್ರ
ಸಾಮಾನ್ಯವಾಗಿ ನಾವು ದೇವರ ಪೂಜೆಗೆ ಪತ್ರೆಗಳನ್ನು ಬಳಸುತ್ತೇವೆ. ಯಾವ ಪತ್ರೆಯಿಂದ ಪೂಜೆ ಮಾಡಿದರೆ ಶುಭ ದೊರಕುತ್ತದೆ ಎಂಬ ಬಗ್ಗೆ ಒಂದು ಅವಲೋಕನ ಇಲ್ಲಿದೆ. ದೇವರ ಕಾರ್ಯಗಳಿಗೆಲ್ಲ ವಿವಿಧ ಬಗೆಯ ಪತ್ರೆಗಳು ಬೇಕೇಬೇಕು. ಅದರಲ್ಲೂ ಒಬ್ಬೊಬ್ಬ ದೇವರಿಗೂ ಒಂದೊಂದು ಪತ್ರೆಯು ವಿಶೇಷ. ಈ ಪತ್ರೆಗಳು ಮತ್ತು ಅವುಗಳನ್ನರ್ಪಿಸಿ ಪೂಜಿಸಿದರೆ ಸಿಗುವ ವಿಶೇಷ ಫಲಾಫಲಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು. ಗರಿಕೆ ಪತ್ರೆ: ಗರಿಕೆ ಪತ್ರೆಯನ್ನು ಮೊದಲು ಪೂಜಿತನಾದ ಮಹಾಗಣಪತಿಗೆ ಸಲ್ಲಿಸುತ್ತಾರೆ. ಪ್ರತಿದಿನವೂ ಗರಿಕೆಯನ್ನು ಗಂಧದಲ್ಲಿ ಅದ್ದಿ ಪೂಜೆ ಮಾಡಿದರೆ ಸಕಲ ಇಷ್ಟ ಕಾರ್ಯಗಳು ನೆರವೇರುತ್ತವೆ. ಶನಿದೇವರಿಗೆ ಪಂಚಮಶನಿಕಾಟ, ಅಷ್ಟಮಶನಿಕಾಟ, ಏಳೂವರೆ ವರ್ಷದ ಶನಿಕಾಟವಿದ್ದವರು ಗರಿಕೆಯನ್ನು ಶನೇಶ್ವರನಿಗೆ ಅರ್ಪಿಸಿದರೆ ಆತನಿಂದ ಆಗುವ ಕಷ್ಟಗಳ ಬಲ ಕಡಿಮೆಯಾಗುತ್ತದೆ. ಆಂಜನೇಯ ಸ್ವಾಮಿಗೆ ಪ್ರತಿದಿನವೂ ಗರಿಕೆಯಿಂದ ಪೂಜೆ ಮಾಡಿದರೆ ಸಂಕಲ್ಪ ಮಾಡಿಕೊಂಡ ಕೆಲಸಗಳು ನೆರವೇರುತ್ತವೆ. ಮಹಾಗಣಪತಿಗೆ ಗರಿಕೆಯ ಹಾರವನ್ನು ಸಮರ್ಪಿಸಿದರೆ ಸಕಲ ಕಾರ್ಯದಲ್ಲಿ ಜಯ ಲಭಿಸಿ ಇಷ್ಟಾರ್ಥಸಿದ್ಧಿ ದೊರಕುತ್ತದೆ. ಪ್ರಾಣಿಗಳಿಗೆ ಸರಿಯಾಗಿ ಜೀರ್ಣವಾಗದೆ ಇದ್ದಾಗ ಗರಿಕೆಯನ್ನು ತಿಂದು ಆರೋಗ್ಯ ಸರಿಪಡಿಸಿಕೊಳ್ಳುತ್ತವೆ. ಹಾಗೆಯೇ ಮನುಷ್ಯನೂ ಗರಿಕೆಯ ರಸವನ್ನು ಕುಡಿದರೆ ಆರೋಗ್ಯ ಭಾಗ್ಯ ಲಭಿಸುತ್ತದೆ ಮರಗ ಪತ್ರೆ: ಯಾರಿಗೆ ಬಹಳ ವರ್ಷಗಳಾದರೂ ಅವರ ಕೋರಿಕೆ ನೆರವೇರುವುದಿಲ್ಲ, ಯ...