ಮಂಗಳ ಗೌರಿ ವ್ರತ, ವಿಧಾನ, ಮಂತ್ರ, ಅರ್ಥ, ಕಥೆ
ಮಂಗಳ ಗೌರಿ ವ್ರತ ಶ್ರಾವಣ ಮಾಸದ ಮಂಗಳ ಗೌರಿ ವ್ರತದಿಂದ ನಿಮ್ಮ ಬಾಳು ಹಸನಾಗುತ್ತೆ, ಶ್ರಾವಣ ಮಾಸ(Shravana Masa) ಬಂತೆಂದರೆ ಒಂದರ ಮೇಲೊಂದು ಹಬ್ಬಗಳು ಶುರುವಾಗುತ್ತವೆ. ಸೋಮವಾರದಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರಾವಣ ಸೋಮವಾರ ಮುಗಿಸಿದ ನಂತರ ಮಂಗಳವಾರ ಮಂಗಳ ಗೌರಿ ವ್ರತ(Mangala Gowri Vratha) ಮಾಡಲಾಗುತ್ತೆ. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳ ಗೌರಿ ವ್ರತ ಆಚರಿಸಲಾಗುತ್ತೆ. ಮದುವೆಯಾದ ಹೊಸ ಮದುಮಗಳು ಈ ವ್ರತ ಮಾಡುವುದರಿಂದ ಅನೇಕ ಫಲಗಳಿವೆ. ಮಂಗಳ ಗೌರಿ ವ್ರತವನ್ನು ಗಂಡನ ದೀರ್ಘಾಯುಷ್ಯ, ಸಂತೋಷದಾಯಕ ದಾಂಪತ್ಯ ಜೀವನಕ್ಕಾಗಿ ಆಚರಿಸಲಾಗುತ್ತೆ. ಅಷ್ಟೇ ಅಲ್ಲದೆ ಈ ದಿನ ಗೌರಿಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ, ಸಂತೋಷ, ಆರೋಗ್ಯ ವೃದ್ಧಿಯಾಗುತ್ತೆ. ಮಂಗಲ್ಯ ದೋಷ ನಿವಾರಣೆಗೂ ಈ ವ್ರತ ಮಾಡುವುದರಿಂದ ಉತ್ತಮ ಫಲಿತಾಂಶವಿದೆ. ಮದುವೆಯಾದ ಮೊದಲ 5 ವರ್ಷಗಳವರೆಗೆ ಮಹಿಳೆಯರು ಈ ವ್ರತವನ್ನು ಆಚರಿಸುತ್ತಾರೆ. ಈ ವರ್ಷ ಆಗಸ್ಟ್ 10, 17, 24 ಹಾಗೂ 31ರಂದು ಶ್ರಾವಣ ಮಂಗಳವಾರ ಬಂದಿದೆ. ಮಂಗಳ ಗೌರಿ ಪೂಜಾ ವಿಧಿ ಮಹಿಳೆಯರು ಗೌರಿ ಆವಾಹನ ಮಂತ್ರ, ಗಣಪತಿ ಆವಾಹನ ಮಂತ್ರ ಮತ್ತು ಇನ್ನು ಹಲವು ದೇವರುಗಳ ಆವಾಹನ ಮಂತ್ರ ಪಠಿಸಬೇಕು. ಮಹಿಳೆಯರು ಸಾಂಪ್ರಧಾಯಿಕ ಉಡುಗೆ ತೊಟ್ಟು, ಹೆಣೆಗೆ ಕುಂಕುಮ, ಕೆನ್ನೆಗೆ ಅರಶಿಣ, ಕಪ್ಪು ಬಳೆ ಹಾಗೂ ತಲೆಗೆ ಹೂ ಮುಡಿದು ದೇವರಿಗೆ ಮೆಚ್ಚಿಗೆಯಾಗುವಂತೆ ಅಲಂಕೃತರಾಗಬೇಕು. ದೇವರಿಗೆ ...