ಪೋಸ್ಟ್‌ಗಳು

ಸಂಕ್ರಾಂತಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಂಕ್ರಾಂತಿ ಹಬ್ಬ ಮತ್ತು ವಿಜ್ಞಾನ

ಇಮೇಜ್
ಸಂಕ್ರಾಂತಿ ಮತ್ತು ವಿಜ್ಞಾನ  • ಪೂರ್ವದಲ್ಲಿ ಸೂರ್ಯನ ಉದಯ ಮತ್ತು ಪಶ್ಚಿಮದಲ್ಲಿ ಅಸ್ತವಾಗುವ ಸೂರ್ಯ ಸರಿಯಾಗಿ ಹುಟ್ಟಿಮುಳುಗುವುದು ವರ್ಷದಲ್ಲಿ ಕೇವಲ ಎರಡು ದಿನ ಮಾತ್ರ. ಉಳಿದ ದಿನಗಳಲ್ಲಿ ಹೀಗೆ ಇರುವುದಿಲ್ಲ. ಇದಲ್ಲೆ ವಿಜ್ಞಾನದಲ್ಲಿ ಈಕ್ವಿನಾಕ್ಸ್‌ ಎನ್ನುತ್ತಾರೆ. ಅಂದು ಹಗಲಿರುಳನ್ನು ಸಮಾನವಾಗಿ ಅಂದರೆ 12 ಗಂಟೆ ಹಗಲು ಹಾಗೂ 12 ಗಂಟೆ ಇರುಳನ್ನು ಸರಿ ಪ್ರಮಾಣದಲ್ಲಿ ಹಂಚಿಕೊಳ್ಳುತ್ತವೆ.  • ಚಳಿಗಾಲದಲ್ಲಿ ಹಗಲು ಕಡಿಮೆ ಇದ್ದು ಇರುಳು ಜಾಸ್ತಿ ಇರುತ್ತಾದೆ. ಈ ಕಾಲದಲ್ಲಿ ಸೂರ್ಯ ದಕ್ಷಿಣದಲ್ಲಿ ಹುಟ್ಟುತ್ತಾನೆ. ಒಂದು ದಿನ ದಕ್ಷಿಣ ತುತ್ತತುದಿ ತಲುಪಿ ಮರುದಿನ ಬೆಳಗ್ಗೆ ಉತ್ತರದಲ್ಲಿ ಗೋಚರಿಸುತ್ತಾನೆ. ಅಂದರೆ ದಕ್ಷಿಣದ ಕಡೆ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿ ಉತ್ತರದಲ್ಲಿ ಕಾಣಿಸಿಕೊಳ್ಳುವ ಕಾಲವೇ ಉತ್ತರಾಯಣದ ದಿನ ಎನ್ನುತ್ತಾರೆ. ಇದು ಚಳಿಗಾಲ ಮುಗಿಯುವ ಕಾಲ ಎನ್ನಲಾಗುತ್ತದೆ.  • ಸೂರ್ಯ ತನ್ನ ಪಥವನ್ನು ಬದಲಾಯಿಸಿ ಅಂದರೆ ಉತ್ತರಕ್ಕೆ ತಿರುಗಿದ ನಂತರ ಅಲ್ಲಿಂದ ಆರು ತಿಂಗಳು ಉತ್ತರದಲ್ಲೇ ಗೋಚರಿಸುತ್ತಾನೆ. ಆಗ ಹಗಲಿನ ಪ್ರಮಾಣ ಹೆಚ್ಚಾಗಿ, ಇರುಳು ಕಡಿಮೆಯಾಗಿರುತ್ತದೆ. ಹೀಗೆ ಸೂರ್ತ ಪಥ ಬದಲಾಯಿಸಿದಾಗ ಬೇಸಿಗೆ ಆರಂಭವಾಯಿತೆಂದು ಅರ್ಥ. ಹೀಗೆ ಮುಂದೆ ಉತ್ತರದ ಕೊನೆಯ ಹಂತ ತಲುಪಿ ತನ್ನ ವಿರುದ್ಧ ದಿಕ್ಕು ಅಂದರೆ ದಕ್ಷಿಣಕ್ಕೆ ಪ್ರವೇಶಿಸಿ ಗೋಚರಿಸುತ್ತಾನೆ. ಆಗ ಬೇಸಿಗೆ ಮುಗಿದು ಮತ್ತೆ ಚಳಿಗಾಲ ಆರಂಭವಾಯ...