ಪೋಸ್ಟ್‌ಗಳು

ವಚನಗಳು.. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಸವಣ್ಣನವರ ವಚನಗಳು

ಇಮೇಜ್
ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ? ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ?  ಉಳ್ಳವರು ಶಿವಾಲಯವ ಮಾಡಿಹರು! ನಾನೇನ ಮಾಡುವೆ ? ಬಡವನಯ್ಯ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ! ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!  ಎನ್ನ ನಡೆಯೊಂದು ಪರಿ | ಎನ್ನ ನುಡಿಯೊಂದು ಪರಿ | ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ | ನುಡಿಗೆ ತಕ್ಕ ನಡೆಯ ಕಂಡರೆ ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |  ಎನಗಿಂತ ಕಿರಿಯರಿಲ್ಲ! ಶಿವಭಕ್ತರಿಗಿಂತ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ! ಕೂಡಲಸಂಗಮದೇವಾ ಎನಗಿದೇ ದಿಬ್ಯ.  ತಂದೆ ನೀನು, ತಾಯಿ ನೀನು; ಬಂಧು ನೀನು ಬಳಗ ನೀನು; ನೀನಲ್ಲದೆ ಮತ್ತಾರು ಇಲ್ಲವಯ್ಯ! ಕೂಡಲಸಂಗಮದೇವ, ಹಾಲಲದ್ದು ನೀರಲದ್ದು.  ವಚನದಲ್ಲಿ ನಾಮಾಮೃತ ತುಂಬಿ. ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಮನದಲ್ಲಿ ನಿಮ್ಮ ನೆನಹು ತುಂಬಿ; ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ; ಕೂಡಲಸಂಗಮದೇವ, ನಿಮ್ಮ ಚರಣಕಮಲದೊಳಗಾನು ತುಂಬಿ!  ಎನ್ನ ವಾಮ-ಕ್ಷೇಮ ನಿಮ್ಮದಯ್ಯ ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ ಎನ್ನ ಮಾನಾಪಮಾನವು ನಿಮ್ಮದಯ್ಯ ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ.  ಇವನಾರವ, ಇವನಾರವ, ಇವ...

ಸರ್ವಜ್ಞನ ವಚನಗಳು

ಇಮೇಜ್
ಬಲ್ಲವರು ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ ಎಲ್ಲರಿಗೆ ಇಲ್ಲ ಸರ್ವಜ್ಞ  ಗುರು ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು ಗುರುತೋರ್ವ ದೈವದೆಡೆಯನು ದೈವತಾ ಗುರುವ ತೋರುವನೇ? ಸರ್ವಜ್ಞ  ದಾನ ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ ಬರೆವರ ಕೂಡ ಹಗೆ ಬೇಡ, ಬಂಗಾರದ  ಎರವ ಬೇಡ ಸರ್ವಜ್ಞ ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು ಆಡಿ ಕೊಡುವವನು ಮಧ್ಯಮನು - ಅಧಮ ತಾನಾಡಿಯೂ ಕೊಡದವನು ಸರ್ವಜ್ಞ  ಜ್ಞಾನಿ   ಆನೆ ನೀರಾಟದಲಿ | ಮೀನ ಕಂಡಂಜುವುದೇ ಹೀನಮಾನವರ ಬಿರುನುಡಿಗೆ - ತತ್ವದ ಜ್ಞಾನಿ ಅಂಜುವನೆ ಸರ್ವಜ್ಞ  ಸ್ವರ್ಗ ಸಂಸಾರ ಬೆಚ್ಚನೆಯಾ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.  ಋಣ ಎಣ್ಣೆ ಬೆಣ್ಣೆಯ ಋಣವು, ಅನ್ನ ವಸ್ತ್ರದ ಋಣವು, ಹೊನ್ನು ಹೆಣ್ಣಿನ ಋಣವು, ತಿರಿದಾಕ್ಷಣದಿ ಮಣ್ಣು ಪಾಲೆಂದ ಸರ್ವಜ್ಞ..