ಶಿವತಾಂಡವ ಸ್ತೋತ್ರ ಉಪಯೋಗ (ಶಿವ ತಾಂಡವ ಸ್ತೋತ್ರದ ಮಹತ್ವಗಳು)
ಶಿವತಾಂಡವ ಸ್ತೋತ್ರ ಉಪಯೋಗ (ಶಿವ ತಾಂಡವ ಸ್ತೋತ್ರದ ಮಹತ್ವಗಳು) ಭಕ್ತರಿಗೆ ಶಿವ ಬೇಗನೆ ಒಲಿಯುವರು ಎಂದು ನಂಬಲಾಗಿದೆ. ಶಿವನಿಗೆ ಸಣ್ಣ ಪಾರ್ಥನೆ ಸಲ್ಲಿಸಿದರೂ ಒಲಿಯುತ್ತಾರೆ ಎನ್ನುವ ನಂಬಿಕೆಯು ಹಿಂದಿನಿಂದಲೂ ಇದೆ. ಈಶ್ವರ ದೇವರು ಒಳ್ಳೆಯ ಆರೋಗ್ಯ, ಕಾಯಿಲೆಗಳ ನಿವಾರಣೆ ಮಾಡುವರು. ಶಿವನ ಭಕ್ತರು ಮಂತ್ರ ಜಪಿಸುವ ಮೂಲಕ ಮತ್ತಷ್ಟು ಶ್ರೀಮಂತ ಹಾಗೂ ಆರೋಗ್ಯವಂತರಾಗಬಹುದು. ಹೀಗಾಗಿ ಹಿಂದೂ ಧರ್ಮದಲ್ಲಿ ಈಶ್ವರ ದೇವರಿಗೆ ಭಕ್ತರು ಹೆಚ್ಚು ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಶಿವನ ಒಲಿಸಿಕೊಳ್ಳಲು ಹಲವಾರು ಮಂತ್ರಗಳು ಇವೆ. ಇಲ್ಲೊಂದು ಸ್ತೋತ್ರವಾಗಿರುವ ಶಿವ ತಾಂಡವ ಸೋತ್ರವನ್ನು ಪಠಿಸುವುದರಿಂದ ಕೇವಲ ಈಶ್ವರ ದೇವರನ್ನು ಮಾತ್ರವಲ್ಲದೆ ಲಕ್ಷ್ಮೀ ದೇವಿಯನ್ನು ಕೂಡ ಒಲೈಸಿ ಕೊಳ್ಳಬಹುದು. ಶಿವ ತಾಂಡವ ಸ್ತೋತ್ರವು ರಾವನನಿಗೆ ಮೀಸಲಾಗಿದೆ. ಯಾಕೆಂದರೆ ಇದನ್ನು ರಚಿಸಿದವರು ಆತ ಮತ್ತು ಶಿವನನ್ನು ಒಲಿಸಿಕೊಳ್ಳಲು ಇದನ್ನು ಆತ ಜಪಿಸಿದ್ದ. ಸಂಪತ್ತು ಮತ್ತು ಐಶ್ವರ್ಯ ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಸಂಪತ್ತು ಮತ್ತು ಎಲ್ಲಾ ರೀತಿಯ ಐಷಾರಾಮವು ನಿಮ್ಮದಾಗುವುದು. ಲೌಕಿಕ ಜೀವನದಲ್ಲಿ ನಿಮ್ಮ ಯಾವುದೇ ಆಸೆಗಳು ಈಡೇರದೆ ಇರುವುದಿಲ್ಲ. ಅದಾಗ್ಯೂ, ನಿಮ್ಮ ಇಚ್ಛೆಗೆ ಅನುಗುಣವಾಗಿ ಇದನ್ನು ಜಪಿಸುವ ರೀತಿಯು ಭಿನ್ನವಾಗಿರುತ್ತದೆ. ಸಂಸಾರಿಗಳೀಗೆ ಇದು ಲಾಭಕಾರಿ ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಕೌಟುಂಬಿಕ ಜೀವನದಲ್ಲಿ ಶಾಂತಿ ...