ಸರ್ವಜ್ಞನ ವಚನಗಳು
ಬಲ್ಲವರು
ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ
ಎಲ್ಲರಿಗೆ ಇಲ್ಲ ಸರ್ವಜ್ಞ
ಗುರು
ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವತಾ
ಗುರುವ ತೋರುವನೇ? ಸರ್ವಜ್ಞ
ದಾನ
ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ
ಬರೆವರ ಕೂಡ ಹಗೆ ಬೇಡ, ಬಂಗಾರದ
ಎರವ ಬೇಡ ಸರ್ವಜ್ಞ
ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು - ಅಧಮ
ತಾನಾಡಿಯೂ ಕೊಡದವನು ಸರ್ವಜ್ಞ
ಜ್ಞಾನಿ
ಆನೆ ನೀರಾಟದಲಿ | ಮೀನ ಕಂಡಂಜುವುದೇ
ಹೀನಮಾನವರ ಬಿರುನುಡಿಗೆ - ತತ್ವದ
ಜ್ಞಾನಿ ಅಂಜುವನೆ ಸರ್ವಜ್ಞ
ಸ್ವರ್ಗ ಸಂಸಾರ
ಬೆಚ್ಚನೆಯಾ ಮನೆಯಿರಲು
ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.
ಋಣ
ಎಣ್ಣೆ ಬೆಣ್ಣೆಯ ಋಣವು,
ಅನ್ನ ವಸ್ತ್ರದ ಋಣವು,
ಹೊನ್ನು ಹೆಣ್ಣಿನ ಋಣವು,
ತಿರಿದಾಕ್ಷಣದಿ ಮಣ್ಣು ಪಾಲೆಂದ ಸರ್ವಜ್ಞ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ