ಶಿವತಾಂಡವ ಸ್ತೋತ್ರ ಉಪಯೋಗ (ಶಿವ ತಾಂಡವ ಸ್ತೋತ್ರದ ಮಹತ್ವಗಳು)
ಶಿವತಾಂಡವ ಸ್ತೋತ್ರ ಉಪಯೋಗ (ಶಿವ ತಾಂಡವ ಸ್ತೋತ್ರದ ಮಹತ್ವಗಳು)
ಭಕ್ತರಿಗೆ ಶಿವ ಬೇಗನೆ ಒಲಿಯುವರು ಎಂದು ನಂಬಲಾಗಿದೆ. ಶಿವನಿಗೆ ಸಣ್ಣ ಪಾರ್ಥನೆ ಸಲ್ಲಿಸಿದರೂ ಒಲಿಯುತ್ತಾರೆ ಎನ್ನುವ ನಂಬಿಕೆಯು ಹಿಂದಿನಿಂದಲೂ ಇದೆ. ಈಶ್ವರ ದೇವರು ಒಳ್ಳೆಯ ಆರೋಗ್ಯ, ಕಾಯಿಲೆಗಳ ನಿವಾರಣೆ ಮಾಡುವರು. ಶಿವನ ಭಕ್ತರು ಮಂತ್ರ ಜಪಿಸುವ ಮೂಲಕ ಮತ್ತಷ್ಟು ಶ್ರೀಮಂತ ಹಾಗೂ ಆರೋಗ್ಯವಂತರಾಗಬಹುದು. ಹೀಗಾಗಿ ಹಿಂದೂ ಧರ್ಮದಲ್ಲಿ ಈಶ್ವರ ದೇವರಿಗೆ ಭಕ್ತರು ಹೆಚ್ಚು ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಶಿವನ ಒಲಿಸಿಕೊಳ್ಳಲು ಹಲವಾರು ಮಂತ್ರಗಳು ಇವೆ. ಇಲ್ಲೊಂದು ಸ್ತೋತ್ರವಾಗಿರುವ ಶಿವ ತಾಂಡವ ಸೋತ್ರವನ್ನು ಪಠಿಸುವುದರಿಂದ ಕೇವಲ ಈಶ್ವರ ದೇವರನ್ನು ಮಾತ್ರವಲ್ಲದೆ ಲಕ್ಷ್ಮೀ ದೇವಿಯನ್ನು ಕೂಡ ಒಲೈಸಿ ಕೊಳ್ಳಬಹುದು. ಶಿವ ತಾಂಡವ ಸ್ತೋತ್ರವು ರಾವನನಿಗೆ ಮೀಸಲಾಗಿದೆ. ಯಾಕೆಂದರೆ ಇದನ್ನು ರಚಿಸಿದವರು ಆತ ಮತ್ತು ಶಿವನನ್ನು ಒಲಿಸಿಕೊಳ್ಳಲು ಇದನ್ನು ಆತ ಜಪಿಸಿದ್ದ.
ಸಂಪತ್ತು ಮತ್ತು ಐಶ್ವರ್ಯ
ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಸಂಪತ್ತು ಮತ್ತು ಎಲ್ಲಾ ರೀತಿಯ ಐಷಾರಾಮವು ನಿಮ್ಮದಾಗುವುದು. ಲೌಕಿಕ ಜೀವನದಲ್ಲಿ ನಿಮ್ಮ ಯಾವುದೇ ಆಸೆಗಳು ಈಡೇರದೆ ಇರುವುದಿಲ್ಲ. ಅದಾಗ್ಯೂ, ನಿಮ್ಮ ಇಚ್ಛೆಗೆ ಅನುಗುಣವಾಗಿ ಇದನ್ನು ಜಪಿಸುವ ರೀತಿಯು ಭಿನ್ನವಾಗಿರುತ್ತದೆ.
ಸಂಸಾರಿಗಳೀಗೆ ಇದು ಲಾಭಕಾರಿ
ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಕೌಟುಂಬಿಕ ಜೀವನದಲ್ಲಿ ಶಾಂತಿ ಹಾಗೂ ಸಂತೋಷ ತಂದುಕೊಡುವುದು ಮಾತ್ರವಲ್ಲದೆ, ಆಕಾಂಕ್ಷೆಗಳನ್ನು ಪೂರೈಸಲು ನೆರವಾಗುವುದು. ಪತಿ ಹಾಗೂ ಪತ್ನಿಯು ಈ ಸ್ತೋತ್ರವನ್ನು ಪಠಿಸುವುದರಿಂದ ಪರಸ್ಪರ ಅನ್ಯೋನ್ಯತೆಯು ಹೆಚ್ಚಾಗಲಿದೆ. ಜ್ಞಾನೋದಯ ಆಗಬೇಕೆಂದು ಬಯಸುವವರು ಈ ಸ್ತೋತ್ರವನ್ನು ಜಪಿಸಬೇಕು.
ಆರ್ಥಿಕ ಸಮಸ್ಯೆಗಳಿಗೆ ಶಿವ ತಾಂಡ ಸ್ತೋತ್ರ ಪರಿಹಾರ ನೀಡುವುದು
ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಈ ಸ್ತೋತ್ರ ಪಠಿಸಿದರೆ ಎಲ್ಲಾ ರೀತಿಯ ಸಾಲದಿಂದ ಮುಕ್ತರಾಗಬಹುದು ಮತ್ತು ಭವಿಷ್ಯದಲ್ಲಿ ಸಾಲದ ಶೂಲಕ್ಕೆ ಸಿಲುಕದೆ ಇರುತ್ತೀರಿ.
ಮದುವೆಗೆ ಸಂಬಂಧಿಸಿದ ಸಮಸ್ಯೆಗಳು
ಮದುವೆಯಾಗಬೇಕೆಂದು ಇರುವವರಿಗೆ ಯಾವುದೇ ಸಮಸ್ಯೆಯಾಗುತ್ತಲಿದ್ದರೆ ಆಗ ಶಿವ ತಾಂಡವ ಸ್ತೋತ್ರವನ್ನು 51 ದಿನಗಳ ಕಾಲ ಜಪಿಸಬೇಕು. ಹೀಗೆ ಮಾಡಿದರೆ ಎಲ್ಲಾ ರೀತಿಯ ಸಮಸ್ಯೆಯು ನಿವಾರಣೆ ಆಗುವುದು.
ವೃತ್ತಿಪರ ಯಶಸ್ಸಿಗಾಗಿ ಶಿವ ತಾಂಡವ ಸ್ತೋತ್ರ ಪಠಿಸಿ
ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ವ್ಯಾಪಾರ ಮತ್ತು ವೃತ್ತಿಯಲ್ಲಿ ಉನ್ನತಿಗೇರಲು ನೆರವಾಗುವುದು. ನಿಮ್ಮ ವ್ಯಾಪಾರವು ಸರಿಯಾಗಿ ನಡೆಯದೆ ಇದ್ದರೆ ಆಥವಾ ನಿರಂತರ ಪ್ರಯತ್ನದ ಹೊರತಾಗಿಯೂ ವೃತ್ತಿಯಲ್ಲಿ ನಿಮಗೆ ಯಾವುದೇ ರೀತಿಯ ಯಶಸ್ಸು ಸಿಗದೆ ಇದ್ದರೆ ಈ ಸ್ತೋತ್ರವನ್ನು ಸುಮಾರು 41 ದಿನಗಳ ಕಾಲ ನಿರಂತರವಾಗಿ ಪಠಿಸಬೇಕು. ಇದು ನಿಮಗೆ ಪ್ರಗತಿ ಒದಗಿಸುವುದು.
ಕಾನೂನಿನ ವಿಚಾರಗಳಲ್ಲಿ ಗೆಲುವು ತಂದುಕೊಡುವುದು
ಕೋರ್ಟ್ ನಲ್ಲಿನ ಕೇಸನ್ನು ಗೆಲ್ಲಲ್ಲು ಅಥವಾ ಶತ್ರುಗಳಿಂದ ಆಗಿರುವ ತಡೆ ನಿವಾರಣೆ ಮಾಡಲು ಈ ಸ್ತೋತ್ರವನ್ನು ನೀವು ಸಂಜೆ ವೇಳೆ 31 ದಿನಗಳ ಕಾಲ ಪಠಿಸಬೇಕು. ಇದು ನಿಮಗೆ ಪ್ರತಿಯೊಂದರಲ್ಲೂ ಗೆಲುವು ತಂದುಕೊಡುವುದು.
ಗ್ರಹಣದ ವೇಳೆ ಶಿವ ತಾಂಡವ ಸ್ತೋತ್ರ
ಸೂರ್ಯಗ್ರಹಣ ಅಥವಾ ಚಂದ್ರಗ್ರಹಣದ ವೇಳೆ ಶಿವ ತಾಂಡವ ಸ್ತೋತ್ರವನ್ನು 1008 ಸಲ ಪಠಿಸುವ ಕಾರಣದಿಂದ ನಿಮಗೆ ಈಶ್ವರ ದೇವರ ಆಶೀರ್ವಾದವು ಸಿಗುವುದು. ನೀವು ಇದನ್ನು ಪಠಿಸಿದರೆ ಭಕ್ತರ ಪ್ರತಿಯೊಂದು ಆಕಾಂಕ್ಷೆಯು ಈಡೇರುವುದು.
ಸಂತಾನಭಾಗ್ಯವಿಲ್ಲದ ದಂಪತಿಗೆ ಒಳ್ಳೆಯ ಮದ್ದು ಶಿವ ತಾಂಡವ ಸ್ತೋತ್ರ
ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಸಂತಾನಭಾಗ್ಯ ಪಡೆಯುವ ಸಲುವಾಗಿ ನೀವು ಈ ಸ್ತೋತ್ರವನ್ನು ಪಠಿಸಬಹುದು. ಪ್ರದೋಶ ದಿನದಂದು ಶಿವತಾಂಡವ ಸ್ತೋತ್ರ ಪಠಿಸಿದರೆ ಅದರಿಂದ ದಂಪತಿಗೆ ಸಂತಾನ ಭಾಗ್ಯವು ಸಿಗುವುದು. 13ನೇ ದಿನವನ್ನು ಪ್ರದೋಷ ಎಂದು ಕರೆಯಲಾಗುತ್ತದೆ. ಇದನ್ನು ನಾವು ಶುಕ್ಲ ಪಕ್ಷ ತ್ರಯೋದಶಿ ಅಥವ ಕೃಷ್ಣ ಪಕ್ಷ ತ್ರಯೋದಶಿ ಎಂದು ಕರೆಯಲಾಗುತ್ತದೆ.
ಸ್ತೋತ್ರವನ್ನು ಜಪಿಸಲು ಇರುವ ಕೆಲವು ನಿಯಮಗಳು
*ಶಿವ ತಾಂಡವ ಸ್ತೋತ್ರ ಜಪಿಸಲು ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಹೋಗಬೇಕು. ಅದು ಈ ರೀತಿಯಾಗಿದೆ.
ದೇಹ ಹಾಗೂ ಮನಸ್ಸು ಪರಿಶುದ್ಧವಾಗಿರಬೇಕು.
*ಉಚ್ಛಾರವು ಸರಿಯಾಗಿ ಇರಬೇಕು. ನಿಧಾನವಾಗಿ ಓದಲು ಪ್ರಯತ್ನಿಸಿ ಮತ್ತು ಅವಸರ ಮಾಡಬೇಡಿ. ಇದರಿಂದ ತಪ್ಪು ಆಗುವುದಿಲ್ಲ.
ಹೊರಗಿನ ಯಾವುದೇ ರೀತಿಯ ವಿದ್ಯಮಾನಗಳಿಗೆ ಮಂತ್ರ ಪಠಿಸುವ ವೆಳೆ ಪ್ರತಿಕ್ರಿಯೆ ನೀಡಲೇಬಾರದು. ಈ ಮಧ್ಯೆ ಮಾತನಾಡಲು ಬಾರದು.
*ನಿಮಗೆ ಈ ಸ್ತೋತ್ರವು ಸರಿಯಾಗಿ ನೆನಪಿನಲ್ಲಿ ಉಳಿಯುವ ತನಕ ಶಿವಲಿಂಗ ಅಥವಾ ಶಿವನ ಚಿತ್ರವನ್ನು ಕಣ್ಣಿನ ಎದುರು ಇಟ್ಟುಕೊಳ್ಳಿ. ಒಂದು ಸಲ ನಿಮಗೆ ಮಂತ್ರವು ನೆನಪಿನಲ್ಲಿ ಉಳಿದ ಬಳಿಕ ನೀವು ಇದನ್ನು ಹಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಪಿಸಿ.
ಶಿವ ತಾಂಡವ ಸ್ತೋತ್ರಂ
ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ
ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್ |
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡತಾಂಡವಂ ತನೋತು ನಃ ಶಿವಃ ಶಿವಮ್ || ೧ ||
ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ-
-ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ |
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ || ೨ ||
ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೇ |
ಕೃಪಾಕಟಾಕ್ಷಧೋರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೇತು ವಸ್ತುನಿ || ೩ ||
ಜಟಾಭುಜಂಗಪಿಂಗಳಸ್ಫುರತ್ಫಣಾಮಣಿಪ್ರಭಾ
ಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೇ |
ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೇದುರೇ
ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ || ೪ ||
ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಳಿಧೋರಣೀ ವಿಧೂಸರಾಂಘ್ರಿಪೀಠಭೂಃ |
ಭುಜಂಗರಾಜಮಾಲಯಾ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ || ೫ ||
ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ-
-ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್ |
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೇಶಿರೋಜಟಾಲಮಸ್ತು ನಃ || ೬ ||
ಕರಾಲಫಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ-
ದ್ಧನಂಜಯಾಧರೀಕೃತಪ್ರಚಂಡಪಂಚಸಾಯಕೇ |
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ-
-ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೇ ಮತಿರ್ಮಮ || ೭ ||
ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್-
ಕುಹೂನಿಶೀಥಿನೀತಮಃ ಪ್ರಬಂಧಬಂಧುಕಂಧರಃ |
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಳಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃ || ೮ ||
ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ-
-ವಿಲಂಬಿಕಂಠಕಂದಲೀರುಚಿಪ್ರಬದ್ಧಕಂಧರಮ್ |
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಚ್ಛಿದಂ ತಮಂತಕಚ್ಛಿದಂ ಭಜೇ || ೯ ||
ಅಗರ್ವಸರ್ವಮಂಗಳಾಕಳಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್ |
ಸ್ಮರಾಂತಕಂ ಪುರಾಂತಕಂ ಭವಾಂತಕಂ ಮಖಾಂತಕಂ
ಗಜಾಂತಕಾಂಧಕಾಂತಕಂ ತಮಂತಕಾಂತಕಂ ಭಜೇ || ೧೦ ||
ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ-
-ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಫಾಲಹವ್ಯವಾಟ್ |
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಳ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ || ೧೧ ||
ದೃಷದ್ವಿಚಿತ್ರತಲ್ಪಯೋರ್ಭುಜಂಗಮೌಕ್ತಿಕಸ್ರಜೋರ್-
-ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ |
ತೃಷ್ಣಾರವಿಂದಚಕ್ಷುಷೋಃ ಪ್ರಜಾಮಹೀಮಹೇಂದ್ರಯೋಃ
ಸಮಂ ಪ್ರವರ್ತಯನ್ಮನಃ ಕದಾ ಸದಾಶಿವಂ ಭಜೇ || ೧೨ ||
ಕದಾ ನಿಲಿಂಪನಿರ್ಝರೀನಿಕುಂಜಕೋಟರೇ ವಸನ್
ವಿಮುಕ್ತದುರ್ಮತಿಃ ಸದಾ ಶಿರಃಸ್ಥಮಂಜಲಿಂ ವಹನ್ |
ವಿಮುಕ್ತಲೋಲಲೋಚನೋ ಲಲಾಟಫಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಸದಾ ಸುಖೀ ಭವಾಮ್ಯಹಮ್ || ೧೩ ||
ಇಮಂ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ಸ್ಮರನ್ಬ್ರುವನ್ನರೋ ವಿಶುದ್ಧಿಮೇತಿಸಂತತಮ್ |
ಹರೇ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್ || ೧೪ ||
ಪೂಜಾವಸಾನಸಮಯೇ ದಶವಕ್ತ್ರಗೀತಂ ಯಃ
ಶಂಭುಪೂಜನಪರಂ ಪಠತಿ ಪ್ರದೋಷೇ |
ತಸ್ಯ ಸ್ಥಿರಾಂ ರಥಗಜೇಂದ್ರತುರಂಗಯುಕ್ತಾಂ
ಲಕ್ಷ್ಮೀಂ ಸದೈವ ಸುಮುಖಿಂ ಪ್ರದದಾತಿ ಶಂಭುಃ || ೧೫ ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ