ಪುರಾಣಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ?
ಪುರಾಣಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ? ನಮ್ಮ ಪುರಾಣ ಕಥೆಗಳಲ್ಲಿ ಬರುವ ಅದೃಷ್ಯರಾದರು, ಪ್ರತ್ಯಕ್ಷರಾದರು, ಅಶರೀರವಾಣಿ ಕೇಳಿಸಿತು, ಶಾಪಕೊಟ್ಟರು , ಶಾಪದಿಂದ ಅಹಲ್ಯೆ ಕಲ್ಲಾದಳು, ಯಜ್ಞದಿಂದ ಮಳೆ ಭರಿಸಿದರು, ಕೋಪದಿಂದ ನೋಡಿದಾಗ ಭಸ್ಮವಾದರು, ತಪಸ್ವಿಗಳು ಆಡಿದ ಮಾತು ಅಥವಾ ಕೊಟ್ಟ ಶಾಪ ಎಂದಿಗೂ ಸುಳ್ಳಾಗಲಾರದು. ಎಂಬೆಲ್ಲಾ ಘಟನೆ ಗಳನ್ನು ನೊಡುತ್ತೇವೆ ಇದು ಸುಳ್ಳು ಎನ್ನುವಂತಿಲ್ಲ ಇಂದಿಗೂ ಸಾಧನೆ ಮಾಡಿದರೆ ಸಾಧಕರ ಮಾತಿನಂತೆಯೇ ಪ್ರಕೃತಿ ವರ್ತಿಸುವುದು ಸಾಧ್ಯವಿದೆ. ಇಂತಹ ಪ್ರಕೃತಿಯನ್ನು ದೈವಿಕ ಶಕ್ತಿಯನ್ನು ಒಲಿಸಿಕೊಳ್ಳುವ ರಹಸ್ಯವನ್ನು ಮಂತ್ರಗಳಲ್ಲಿ ಹುದುಗಿಸಿ ನಮ್ಮ ಹಿರಿಯರು ನಮಗೆ ನೀಡಿದ್ದಾರೆ. ಇಂತಹ ಮಂತ್ರಸಿದ್ದಿಯಿಂದ ನಾವುಕೂಡಾ ಅತೀಂದ್ರಯವಾದುದನ್ನು ಸಾಧಿಸಬಹುದಾಗಿದೆ. ಕುಳಿತಲ್ಲಿಂದಲೇ ವಿಶ್ವವನ್ನು ನೋಡಬಹುದಾಗಿದೆ. ನೆನೆಸಿದಲ್ಲಿ ಕ್ಷಣ ಮಾತ್ರದಲ್ಲಿ ನಾವು ಚ್ಚಿಸಿದ ಸ್ಥಳವನ್ನು ತಲುಪುವುದೂ ಸಾಧ್ಯವಿದೆ. ಹಿಂದೂಗಳಲ್ಲಿ ವಿಶೇಷ ವಿದ್ಯೆಗಳು ಭಾರತದಲ್ಲಿ ಕಲಿಸಲ್ಪಡುತ್ತಿದ್ದವು. ನಮ್ಮ ಪರಂಪರೆಯಲ್ಲಿ 64 ವಿದ್ಯೆಗಳಿವೆ. ಹಾಗೆಯೇ ಅಣಿಮಾ, ಲಘಿಮಾ, ಮಹಿಮಾ, ಗರಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶಿತ್ವ, ವಶಿತ್ವ ಎಂಬುದಾಗಿ ಅಷ್ಠ ಸಿದ್ದಿಗಳೂ ಕೂಡಾ ಉಲ್ಲೇಖಿಸಲ್ಪಟ್ಟಿದೆ. ಆದರೆ ಇಂದು ಸಾಧಕರ ಕೊರತೆ ಇದೆ ಮತ್ತು ವಿದ್ಯೆಯನ್ನು ದರುಪಯೋಗ ಪಡಿಸಿಕ...