ಪುರಾಣಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ?


ಪುರಾಣಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ?

ನಮ್ಮ ಪುರಾಣ ಕಥೆಗಳಲ್ಲಿ ಬರುವ ಅದೃಷ್ಯರಾದರು, ಪ್ರತ್ಯಕ್ಷರಾದರು, ಅಶರೀರವಾಣಿ ಕೇಳಿಸಿತು, ಶಾಪಕೊಟ್ಟರು , ಶಾಪದಿಂದ ಅಹಲ್ಯೆ ಕಲ್ಲಾದಳು, ಯಜ್ಞದಿಂದ ಮಳೆ ಭರಿಸಿದರು, ಕೋಪದಿಂದ ನೋಡಿದಾಗ ಭಸ್ಮವಾದರು, ತಪಸ್ವಿಗಳು ಆಡಿದ ಮಾತು ಅಥವಾ ಕೊಟ್ಟ ಶಾಪ ಎಂದಿಗೂ ಸುಳ್ಳಾಗಲಾರದು. ಎಂಬೆಲ್ಲಾ ಘಟನೆ ಗಳನ್ನು ನೊಡುತ್ತೇವೆ ಇದು ಸುಳ್ಳು ಎನ್ನುವಂತಿಲ್ಲ ಇಂದಿಗೂ ಸಾಧನೆ ಮಾಡಿದರೆ ಸಾಧಕರ ಮಾತಿನಂತೆಯೇ ಪ್ರಕೃತಿ ವರ್ತಿಸುವುದು ಸಾಧ್ಯವಿದೆ. ಇಂತಹ ಪ್ರಕೃತಿಯನ್ನು ದೈವಿಕ ಶಕ್ತಿಯನ್ನು ಒಲಿಸಿಕೊಳ್ಳುವ ರಹಸ್ಯವನ್ನು ಮಂತ್ರಗಳಲ್ಲಿ ಹುದುಗಿಸಿ ನಮ್ಮ ಹಿರಿಯರು ನಮಗೆ ನೀಡಿದ್ದಾರೆ. ಇಂತಹ ಮಂತ್ರಸಿದ್ದಿಯಿಂದ ನಾವುಕೂಡಾ ಅತೀಂದ್ರಯವಾದುದನ್ನು ಸಾಧಿಸಬಹುದಾಗಿದೆ. ಕುಳಿತಲ್ಲಿಂದಲೇ ವಿಶ್ವವನ್ನು ನೋಡಬಹುದಾಗಿದೆ. ನೆನೆಸಿದಲ್ಲಿ ಕ್ಷಣ ಮಾತ್ರದಲ್ಲಿ ನಾವು ಚ್ಚಿಸಿದ ಸ್ಥಳವನ್ನು ತಲುಪುವುದೂ ಸಾಧ್ಯವಿದೆ. ಹಿಂದೂಗಳಲ್ಲಿ ವಿಶೇಷ ವಿದ್ಯೆಗಳು ಭಾರತದಲ್ಲಿ ಕಲಿಸಲ್ಪಡುತ್ತಿದ್ದವು. ನಮ್ಮ ಪರಂಪರೆಯಲ್ಲಿ 64 ವಿದ್ಯೆಗಳಿವೆ. ಹಾಗೆಯೇ ಅಣಿಮಾ, ಲಘಿಮಾ, ಮಹಿಮಾ, ಗರಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶಿತ್ವ, ವಶಿತ್ವ ಎಂಬುದಾಗಿ ಅಷ್ಠ ಸಿದ್ದಿಗಳೂ ಕೂಡಾ ಉಲ್ಲೇಖಿಸಲ್ಪಟ್ಟಿದೆ. ಆದರೆ ಇಂದು ಸಾಧಕರ ಕೊರತೆ ಇದೆ ಮತ್ತು ವಿದ್ಯೆಯನ್ನು ದರುಪಯೋಗ ಪಡಿಸಿಕೊಳ್ಳವ ನೀಚಜನರು ಅಧಿಕ ವಾಗಿದ್ದಾರೆ ಆದುದರಿಂದ ತಿಳಿದವರೂ ಅದನ್ನು ಇತರರಿಗೆ ಕಲಿಸುವ ಧೈರ್ಯ ಮಾಡುವುದಿಲ್ಲ.

ನೂರೈವತ್ತು ವರುಷಗಳ ಹಿಂದೆ ನಮ್ಮ ಪುರಾಣಗಳಲ್ಲಿ ವರ್ಣಿಸಿದ ದೇವತೆಗಳು ವಿಮಾನದಲ್ಲಿ ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದರು ಎನ್ನುವ ಕಥೆ ಹಾಸ್ಯಾಸ್ಪದವಾಗಿತ್ತು. ಆದರೆ ಇಂದು ಸತ್ಯವಾಗಿದೆ. ಅಶರೀರವಾಣಿ ಕೇಳುತ್ತಿತ್ತು ಎಂದರೆ ಆಕಾಶದಿಂದ ಕೇಳುವ ಮಾತು ಯಾವುದೇ ಶರೀರ ಇಲ್ಲದೆ ಎಲ್ಲಿಂದಲೋ ಹೇಳಿದ ಮಾತು ಎಲ್ಲಿಯೋ ಇರುವವರಿಗೆ ಕೇಳುವುದು. ವಿಚಿತ್ರವಾಗಿತ್ತು ಇಂದು ಮೋಬೈಲ್ ದೂರವಾಣಿಯಿಂದ ಇದು ನಿಜವಾಗಿದೆ. ಅಮೇರಿಕಾದಿಂದ ಹೇಳಿದ ಮಾತು ನಮ್ಮ ಮನೆಯ ಜಗಲಿಯಲ್ಲಿ ಕೇಳುತ್ತದೆ. ವಿದುರ ಅರಮನೆಯಿಂದಲೇ ಯುಧ್ಧಭೂಮಿಯನ್ನು ನೋಡಿ ಯುದ್ಧದ ಗತಿಯನ್ನು ಧೃತರಾಷ್ಟ್ರನಿಗೆ ವಿವರಿಸಿದ ಎನ್ನುವ ಕಥೆ ವಿಚಿತ್ರವಾಗಿ ಕಂಡರೂ ಇಂದಿನ ದೂರದರ್ಷನ ಆ ಸಾಧ್ಯತೆಯನ್ನು ಸತ್ಯವಾಗಿಸಿದೆ ಎಲ್ಲೋ ಆಡುವ ಕ್ರಿಕೆಟ್ ಆಟ, ಎಲ್ಲೋ ಮರುಭೂಮಿಯಲ್ಲಿ ನಡೆಯುವ ಯುದ್ಧವನ್ನು ನಾವು ಇಂದು ನೇರವಾಗಿ TV ಯಲ್ಲಿ ನೋಡುತ್ತಿದ್ದೇವೆ. ಧುರ್ಯೋಧನಾದಿಗಳನ್ನು ವ್ಯಾಸರು ನೂರು ಮಡಕೆಗಳಲ್ಲಿಟ್ಟು ಅದರಿಂದ ಮಕ್ಕಳಾಗಿ ಹೊರಬಂದರು ಎನ್ನುವ ಕಥೆಇದೆ. ಇಂದು ಪ್ರಣಾಳ ಶಿಶುಗಳಮೂಲಕ ವಿಜ್ಞಾನಿಗಳು ಗರ್ಭದ ಹೊರಗೇ ಜೀವಸೃಷ್ಠಿಯನ್ನು ಮಾಡುವುದನ್ನು ಸಾಧ್ಯವಾಗಿಸಿದ್ದಾರೆ. ದ್ರೋಣರು ದೊನ್ನೆಯಲ್ಲಿ ಹುಟ್ಟಿದರು, ಅಗಸ್ತ್ಯರು ಮಡಕೆಯಲ್ಲಿ ಹುಟ್ಟಿದರು ಹೆಣ್ಣಿನ ಸಂಪರ್ಕವಿಲ್ಲದೆ ಹುಟ್ಟಿದವರು, ಕೇವಲ ಗಂಡಿನಿಂದಮಾತ್ರ ಹುಟ್ಟಿದವರು, ಕೇವಲ ಹೆಣ್ಣಿನಿಂದ ಹುಟ್ಟಿದವರು, ಯಜ್ಞದಿಂದ ಹುಟ್ಟಿದವರು, ಶಿವನ ಜಡೆಯಿಂದ ವೀರಭದ್ರ ಹುಟ್ಟಿದ, ಎಂಬೇಲ್ಲಾ ಕಥೆ ಕೇಳುತ್ತೇವೆ. ಇಂದು ತದ್ರೂಪಿ ಸೃಷ್ಟಿಯ ಮೂಲಕ ಹೆಣ್ಣಿನ ಅಗತ್ಯವೇ ಇಲ್ಲದೆ ಜೀವ ಸೃಷ್ಠಿಸಾಧ್ಯ ಎನ್ನುವುದನ್ನು ವಿಜ್ಞಾನ ಸಾಧಿಸಿದೆ. ಕೇವಲ ಮನುಷ್ಯನ ಒಂದು ಜೀವಕಣದಿಂದ ಅವನಂತಹುದೇ ಇನ್ನೊಂದು ಜೀವಿಯನ್ನು ಸೃಷ್ಟಿಸುವುದು ಅಸಾಧ್ಯವಲ್ಲ ಎನ್ನುವುದು ಇಂದು ಸತ್ಯವಾಗಿದೆ. ಅದನ್ನು ಇಂದು ಅಂಗಾಂಶ ಕೃಷಿ ಎಂಬುದಾಗಿ ಕೃಷಿ ಇಲಾಖೆಯಲ್ಲಿ ಬಳಸಿಕೊಂಡಿದ್ದಾರೆ ಇದನ್ನು ಟಿಶ್ಯೂ ಕಲ್ಚರ್ ಎನ್ನುತ್ತಾರೆ. ಒಬ್ಬ ಮನುಷ್ಯನ ಜೀವ ಕಣಗಳಿಂದ ಅದೇರೂಪದ ಸಾವಿರಾರು ಜೀವಿಗಳನ್ನು ಇಂದಿನ ವಿಜ್ಞಾನದಿಂದ ಸೃಷ್ಟಿಸಬಹುದಾಗಿದೆ. ಇದು ಸತ್ಯವೆಂದ ಮೇಲೆ ಸಗರನಿಗೆ ಐವತ್ತು ಸಾವಿರ ಮಕ್ಕಳಿದ್ದರು ಎನ್ನುವ ಕಥೆ ಸುಳ್ಳು ಎನ್ನಲಾಗುವುದಿಲ್ಲ. ಐವತ್ತು ಸಾವಿರ ಮಕ್ಕಳು ಹೇಗೆ ಹುಟ್ಟಿದರು ಎನ್ನುವುದನ್ನು ವಿವರಿಸಿಲ್ಲ ಆದರೂ ರಘುವಂಶದಲ್ಲಿ ಮಡಕೆಗಳಲ್ಲಿ ಅವರನ್ನು ಸಂಸ್ಕಾರ ಮಾಡಿ ಪಡೆಯಲಾಯಿತು ಎನ್ನುವ ಉಲ್ಲೇಖವನ್ನು ಸೂಚಿಸುತ್ತಾರೆ. ಪ್ರತಿ ಹತ್ತು ಮಡಕೆಗಳಿಗೆ ಒಬ್ಬೊಬ್ಬರು ದಾಸಿಯರು ನೋಡಿಕೊಂಡರು ಎನ್ನುವ ಉಲ್ಲೇಖವಿರುವುದಾಗಿ ಉಪನ್ಯಾಸಕಾರರೊಬ್ಬರು ಉಲ್ಲೇಖಿಸಿದ್ದಾರೆ. ಅಲ್ಲದೆ ಮಗುವಿನ ಜನನವಾಗುವಾಗ ಆಗುವ ರಕ್ತಸ್ರಾವದ ಪ್ರತಿಯೊಂದು ರಕ್ತಕಣದಲ್ಲಿಯೂ ಮಗುವನ್ನು ಪಡೆಯಲುಸಾಧ್ಯವಿದೆ ಎಂಬುದಾಗಿ ಒಂದುಕಡೆ ಹಿಂದೂ ಶಾಸ್ತ್ರಗಳಲ್ಲಿ ಉಲ್ಲೇಖವಿದೆ ಎಂಬೂದಾಗಿಯೂ ಪಂಡಿತರು ಪ್ರವಚನದಲ್ಲೊಮ್ಮೆ ಹೇಳಿದ್ದು ಕೇಳಿದ್ದೇನೆ. ಅಂದರೆ ಇಂದಿನ ವಿಜ್ಞಾನ ಕಂಡುಹಿಡಿದಿರುವ ತಂತ್ರಜ್ಞಾನ ಅಂದೇ ನಮ್ಮ ಋಷಿಮುನಿಗಳಿಗೆ ತಿಳಿದಿತ್ತು ಎನ್ನುವುದು ಸ್ಪಷ್ಠವಾಗುತ್ತದೆ. ಇಂದು ಅದಕ್ಕೆ ಸಾಕ್ಷಿಕೊಡಲಾಗದಿದ್ದರೂ ನಾವು ಅಭಿಮಾನ ಪಡಲು ಹಿಂಜರಿಕೆ ಬೇಕಿಲ್ಲ. ಸತ್ತು 7 ದಿನಕ್ಕೆ ಏಸುಕ್ರಿಸ್ತ ಪುನಃ ಬಂದ ಎಂದು ನಂಬುವವರಿರುವಾಗ, ದೇವರೇ ಪೈಗಂಬರರಿಗೆ ಉಪದೇಶಕೊಟ್ಟರೆಂದು ನಂಬುವಾಗ ನಾವೇಕೆ ನಮ್ಮ ಪುರಾಣ ಕಥೆಗಳಬಗ್ಗೆ ಸಂಶಯಪಡಬೇಕು? ಉತ್ತಮವಾದ ಬದುಕಿಗೆ ಬೇಕಾದುದನ್ನು ನಂಬೋಣ ಸಮಾಜಕ್ಕೆ ಹಾನಿಕರವಾಗಿದ್ದನ್ನು ತ್ಯಜಿಸೋಣ ನಂಬ ಬೇಕಿಲ್ಲ. ನಮ್ಮ ಹಿರಿಯರು ಗ್ರಹಗಳನ್ನು ಅವುಗಳ ಪರಿಣಾಮಗಳನ್ನು ಗ್ರಹಣ ಗಳನ್ನು ಗುರುತಿಸಿರುವುದು ಸತ್ಯತಾನೇ, ಸಾವಿರಾರು ವರ್ಷಗಳ ಹಿಂದೆಯೇ ಕರಾರುವಕ್ಕಾಗಿ ಗ್ರಹಣವನ್ನು ನಮ್ಮ ಪಂಚಾಂಗ ತಜ್ಞರು ಲೆಕ್ಕಹಾಕುತ್ತಿರಲಿಲ್ಲವೇ? ಮೂರ್ಖರಾದ ಬ್ರಿಟಿಶರ ಗುಲಾಮರಾದ, ಸ್ವತಂತ್ರ ನಂತರ ನಹರೂ ಪರಿವಾರದ ಗುಲಾಮರಾದ ಜನರಿಗೆ ತಮ್ಮ ಪರಂಪರೆಯಬಗ್ಗೆ ಹೆಮ್ಮ ಇಲ್ಲ. ವಿದೇಷದ ಆಮದು ಲೂಟಿಕೋರ ಮತವನ್ನು ಹಿಡಿದು ಅವನತಿಯತ್ತ ನಡೆಯುತ್ತಿರುವವರಿಗೂ ತಾವು ಹಿಡಿದಿರುವುದು ವಿಷಸರ್ಪ ನ್ನುವ ಅರಿವಿಲ್ಲ. ಆದರೆ ಅತ್ಮಾಭಿಮಾನಿ ಹಿಂದುಗಳಿಗೇನೂ ದೇಶದಲ್ಲಿ ಕೊರತೆ ಇಲ್ಲ ಅಂತಹವರನ್ನು ನಾವು ಒಟ್ಟುಗೂಡಿಸಬೇಕಿದೆ. ಬೇರೆಯವರ ಅಂಗಾಂಗವನ್ನು ಜೋಡಿಸುವ ಇಂದಿನ ವಿಜ್ಞಾನಕ್ಕೆ ಸವಾಲೋ ಎಂಬಂತೆ ನಮ್ಮ ಗಣಪತಿಯ ಕಥೆ ಇದೆ. ಇಂದಿನ ಎಷ್ಟೋ ಸಾಧ್ಯತೆಯನ್ನು ಅಂದೇ ಸಾಧಿಸಿರುವುದು ಭಾರತೀಯರ ಸಾಧನೆಯಾಗಿದೆ. ಅಳಿದ ಜ್ಞಾನವು ಕಥೆಯಂತೆಯೇ ಭಾಸವಾಗುತ್ತದೆ. ಆದರೆ ಅದನ್ನೆಲ್ಲಾನಾವಿಂದು ಮರೆತಿದ್ದೇವೆ. ನಮ್ಮವರ ಬಗ್ಗೆ ನಮಗೆ ಅನಾದರವಿದೆ. ನಮ್ಮ ಶ್ರೇಷ್ಟ ಪರಂಪರೆಯನ್ನು ಗೊಡ್ಡುಸಂಪ್ರದಾಯವೆಂದು ಅಜ್ಞಾನದಿಂದ ತಿರಸ್ಕರಿಸುತ್ತಿದ್ದೇವೆ. ಬ್ರಾಹ್ಮಣರು ಆಚರಿಸುತ್ತಿದ್ದ ಮಡಿ ಮೈಲಿಗೆ ಗಳನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ಇಂದು ಕೊರೋನಾ ಬಂದಾಗ ಡೀ ವಿಶ್ವವೇ ನಮಗೆ ಕೈಮುಗಿಯುತ್ತಿದೆ, ಸಾಮಾಜಿಕ ಅಂತರ ಪ್ರತಿಯೊಬ್ಬರೂ ಕಾಯ್ದುಕೊಳ್ಳಿ ಎರಡು ಮೀಟರ್ ದೂರ ನಿಲ್ಲಿ. ಕೈತೊಳೆದೇ ಒಳಬನ್ನಿ ಎಂಬುದಾಗಿ ವಿಶ್ವ ಸಂಸ್ಥೆಯೇ ಸಾರುತ್ತಿರುವುದನ್ನು ನಾವು ನೋಡುತ್ತೇವೆ. ಯಾವುದೇ ಆಚರಣೆ ನಮ್ಮೊಳಿತಿಗೆ ಬಳಸಬೇಕು ಇನ್ನೊಬ್ಬರಿಗೆ ತೊಂದರೆಕೊಡಲು ಬಳಸಬಾರದು ಇದು ವಿವೇಚನೆ. ಇಂದಿನ ಜನರಿಗೆ ಶಾಸ್ತ್ರಜ್ಞಾನದ ಅರಿವಿಲ್ಲದಿರಲು ಧಾರ್ಮಿಕ ಶಿಕ್ಷಣದ ಕೊರತೆ ಕಾರಣ. ದರೊಂದಿಗೆ ವೈಚಾರಿಕ ಜ್ಞಾನವಿಲ್ಲದ ಗೊಡ್ಡು ಸಂಪ್ರದಾಯವಾದಿಗಳೂ ಹಾಗೂ ಮೂರ್ಖ ಅಂಧಾಭಿಮಾನಿಗಳೂ ಕಾರಣರಾಗಿದ್ದಾರೆ. ಹಿಂದೂ ವಿರೋಧಿ ಕಾಂಗ್ರೇಸ್ ಸರಕಾರಗಳು ಹಿಂದೂ ದೇವಾಲಯಗಳನ್ನು ತಾನು ವಷಪಡಿಸಿಕೊಂಡು ಧರ್ಮ ಪ್ರಸಾರ ಮಾಡದೆ ದೇವಾಲಯಗಳನ್ನು ವ್ಯವಹಾರಕೇಂದ್ರವಾಗಿಸಿ ಹಿಂದುಗಳ ಹಣ ಲೂಟಿ ಮಾಡಿದೆ. ಜಗತ್ತು ಮಹಾಸ್ಪೋಟದಿಂದ ಸೃಷ್ಟಿಯಾಯಿತೆನ್ನುವ ಭಾರತೀಯರ ಸಿದ್ದಾಂತವನ್ನು ಇಂದು ವಿಜ್ಞಾನ ಒಪ್ಪುತ್ತಿದೆ. ಸೃಷ್ಟಿಯ ಶಬ್ಧ Cosmic Sound ಓಂಕಾರ ವೆನ್ನುವುದು ಇಂದು ನಾಸಾ ಸಂಶೋಧನೆಯಿಂದ ಕಂಡುಕೊಂಡಿದೆ. ಇಂದಿನ ಗಣಕ ಯಂತ್ರಕ್ಕೆ (Computer) ಜಗತ್ತಿನ ಅತ್ಯಂತ ಸೂಕ್ತ ಭಾಷೆ ಸಂಸ್ಕೃತವೆಂದು ಅಮೇರಿಕಾದ NASA ವಿಜ್ಞಾನಿಗಳು ಒಪ್ಪಿದ್ದಾರೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸಂಸ್ಕೃತ ಕಲಿಯುವುದು ಕಡ್ಡಾಯವಾಗಿದೆ ಎಂದರೆ ಸಂಸ್ಕೃತದ ಮಹತ್ವದ ಅರಿವಾಗಬೇಕು. ಶಂಕರಾಚಾರ್ಯರ ಕಥೆಯಲ್ಲಿ ಪರಕಾಯ ಪ್ರವೇಶ ಮಾಡಿದರು ಎನ್ನುವ ಕಥೆ ಬರುತ್ತದೆ. ಇದು ಅಸಾಧ್ಯವಲ್ಲ ಎಂಬುದು ಸತ್ಯವಾಗಿದೆ. ಅಂತಚಕ್ಷುವಿನಿಂದ ಕುಳಿತಲ್ಲಿಂದಲೇ ಎಲ್ಲವನ್ನೂ ನೋಡಲು ಮನುಷ್ಯನಿಗೆ ಸಾಧ್ಯವಿದೆ . ಜಗತ್ತಿನ ಎಲ್ಲಿಯದೋ ಧ್ವನಿಯನ್ನು ಕೇಳುವುದು ಸಾಧ್ಯವಿದೆ. ಎಲ್ಲಿಯೋ ಮಾಯವಾಗಿ ಎಲ್ಲಿಯೋ ಪ್ರತ್ಯಕ್ಷವಾಗುವುದು ಸಾಧ್ಯವಿದೆ. ಇವುಗಳನ್ನು ದೂರ ಶ್ರವಣ, ದೂರಗಮನ, ದೂರ ದರ್ಷನ ಎನ್ನಬಹುದು. ಯಾವುದೇ ಯಂತ್ರದ ಸಾಹಾಯವಿಲ್ಲದೆ ಕೇವಲ ಸಾಧನೆಯಿಂದ ನಮ್ಮ ಇಂದ್ರಿಯಗಳಿಂದಲೇ ಇವುಗಳನ್ನು ಸಾಧಿಸಬಹುದಾಗಿದೆ. ಇಂತಹ ಸಿದ್ದಿಯನ್ನು ಸಾಧಿಸಿಕೊಂಡವರೇ ಮಹಾಮಹಿಮರು ಅವತಾರ ಪುರುಷರು ಆಗಿದ್ದಾರೆ. ನಾಗ ಪಾದ್ರಿಗಳು ದರ್ಷನ ಪಾದ್ರಿಗಳು ಭೂಮಿಯಲ್ಲಿ ಹುದುಗಿರುವ ದೇವರ ವಿಗ್ರಹಗಳನ್ನು ಜಾಗಗಳನ್ನು ತೋರಿಸಿ ತೆಗೆಸುವುದನ್ನು ಇಂದೂ ನಾವು ನೋಡುತ್ತಿದ್ದೇವೆ. ಇವುಗಳಿಗೆ ವಿಕೃತವಾದಿಗಳಲ್ಲಿ ಉತ್ತರ ಇಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೇಡರ ದಾಸಿಮಯ್ಯನವರ ವಚನಗಳು

ಸರ್ವಜ್ಞನ ವಚನಗಳು

ರಾವಣನ ಕುರಿತು ಸಂಪೂರ್ಣ ಪ್ರಶ್ನೋತ್ತರಗಳು