ಪೋಸ್ಟ್‌ಗಳು

ಶಮಂತಕೋಪಾಖ್ಯಾನ, ಚತುರ್ಥಿ ಚಂದ್ರನ ದರ್ಶನ ಮುಕ್ತಿ

ಇಮೇಜ್
ಶಮಂತಕೋಪಾಖ್ಯಾನ: ಗಣೇಶ ಚತುರ್ಥಿಯ ಹಬ್ಬದಂದು ತನ್ನ ಭಕ್ತರು ಅರ್ಪಿಸಿದ ಬಗೆಬಗೆಯ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕವಾಹನ. ಹೊಟ್ಟೆಯ ಭಾರದಿಂದ ಆಯ ತಪ್ಪಿ ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ. ಅದರಿಂದ ಅವಮಾನಿತನಾದ ಗಣಪ, ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ ಎಂದು ಶಪಿಸಿದನಂತೆ. ಉಂಡವನು ಗಣಪ, ನಕ್ಕವನು ಚಂದ್ರ, ಆದರೆ, ಶಾಪ ಮಾತ್ರ ಚಂದ್ರನನ್ನು ನೋಡಿದವರಿಗೆ!! “ಚೌತಿಯ ಚಂದ್ರನ ದರುಶನದಿಂದ ಕಾಡಿತು ಕೃಷ್ಣಗೆ ಅಪವಾದ,ಈ ಕತೆ ಕೇಳಲು ದೊರೆವುದು ಜನರಿಗೆ ದೋಷದ ಪರಿಹಾರ.. “ ಹೀಗೊಂದು ಹಾಡನ್ನು ಕೇಳಿದ್ದೇವೆ. ಉಳಿದ ದಿನಗಳಲ್ಲಿ ಸಾಮಾನ್ಯವಾಗಿ ಸಂಜೆ ಮನೆಯ ಹೊರಗೆ ಬಂದು ಚಂದ್ರನನ್ನು ನೋಡುವುದಿಲ್ಲ, ನೋಡಿದ್ದರೂ ಗಮನಿಸುವುದಿಲ್ಲ. ಆದರೆ, ಚೌತಿಯ ದಿನ ತಪ್ಪದೇ ಚಂದ್ರದರ್ಶನವಾಗುತ್ತದೆ! ಕಾರಣವಿಷ್ಟೆ, ಅಕ್ಕ-ಪಕ್ಕದ ಮನೆಯವರು ಹಬ್ಬದ ದಿನ ಸಂಜೆ ಅರಶಿನ-ಕಂಕುಮಕ್ಕೆ ಬನ್ನಿ ಎಂದು ಆಹ್ವಾನಿಸಿರುತ್ತಾರೆ. ಸದಾ ಸಂಜೆ ಮನೆಯೊಳಗೆ ಇರುವವರು, ಹಬ್ಬದ ದಿನ ಸಂಜೆ ಅಕ್ಕ-ಪಕ್ಕದ ಮನೆಗೆ ಹೋಗುವಾಗ ಅಯಾಚಿತವಾಗಿ ಆಕಾಶದತ್ತ ನೋಡಿರುತ್ತೇವೆ. ಸಾಮಾನ್ಯವಾಗಿ ಮೋಡದ ಮರೆಯಲ್ಲೋ, ಮರಗಳ ಎಡೆಯಲ್ಲೋ ಇರುವ ಚಂದ್ರ ಚೌತಿಯಂದು ಲಕಲಕನೇ ಹೊಳೆಯುತ್ತಾ ದರ್ಶನ ಕೊಡುತ್ತಾನೆ. ಅಲ್ಲಿಗೆ, ಪ್ರತಿವರ್ಷವೂ ಅಪವಾದ ಗ್ಯಾರಂಟಿ ಅಂತ ಆಯ್ತಲ್ಲ. ಅದಕ್ಕೂ ಶಾಸ್ತ್ರೀಯ ಪರಿಹಾರ ಬಹಳ ಸರಳ. ಶಮಂ...

ಬೇಸಿಗೆಯಲ್ಲಿ ತಿನ್ನಬೇಕಾದ ಆಹಾರಗಳು ಯಾವವು?

 ಬೇಸಿಗೆಯಲ್ಲಿ ತಿನ್ನಬೇಕಾದ ಆಹಾರಗಳು ಯಾವವು? 1. ಕಲ್ಲಂಗಡಿ ಈ ಹಣ್ಣಿನಲ್ಲಿ ಸುಮಾರು 90% ನೀರಿನ ಅಂಶ ಇರುವುದರಿಂದ ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣಾಗಿದೆ. ಅದಲ್ಲದೆ ಕಲ್ಲಂಗಡಿ ಸೇವನೆಯು ದೇಹವನ್ನು ಹೈಡ್ರೇಟ್ ಮತ್ತು ತಂಪಾಗಿಡಲು ಸಹಾಯ ಮಾಡುತ್ತದೆ. ಇದು ವಿಟಮಿನ್ ಸಿ, ಎ ಮತ್ತು ಪೊಟ್ಯಾಸಿಯಮ್ ನ ಉತ್ತಮ ಮೂಲವಾಗಿದೆ, ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. 2. ಸೌತೆಕಾಯಿ ಈ ತರಕಾರಿ ಮತ್ತೊಂದು ಹೈಡ್ರೇಟಿಂಗ್ ಆಹಾರವಾಗಿದ್ದು, ಇದು ನೀರಿನ ಅಂಶದಿಂದ ಸಮೃದ್ಧವಾಗಿದೆ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಈ ತರಕಾರಿ ದೇಹದ ತಾಪಮಾನವನ್ನು ನಿಯಂತ್ರಿಸಲು ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಸೌತೆಕಾಯಿಗಳನ್ನು ಸಲಾಡ್ಗಳು, ಸ್ಮೂಥಿಗಳು ಅಥವಾ ಸೈಡ್ ಡಿಶ್ ಆಗಿ ಸೇವಿಸಬಹುದು. 3. ಎಳನೀರು ಎಳನೀರು ನೈಸರ್ಗಿಕವಾಗಿ ಬಾಯಾರಿಕೆಯನ್ನು ನೀಗಿಸುವ ಪಾನೀಯವಾಗಿದ್ದು, ಇದು ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ನಂತಹ ಎಲೆಕ್ಟ್ರೋಲೈಟ್ಗಳಿಂದ ಸಮೃದ್ಧವಾಗಿದೆ. ಜೊತೆಗೆ ಎಳನೀರು, ಬಿಸಿ ವಾತಾವರಣದಲ್ಲಿ ದ್ರವಗಳನ್ನು ಮರುಪೂರಣ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲವಾಗಿದೆ. 4. ಪುದೀನಾ ಪುದೀನಾದಲ್ಲಿ ಮೆಂಥಾಲ್ ಇದ್ದು, ಇದು ದೇಹವನ್ನು ತಂಪಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಜೀರ್...

ಶಿವತಾಂಡವ ಸ್ತೋತ್ರ ಉಪಯೋಗ (ಶಿವ ತಾಂಡವ ಸ್ತೋತ್ರದ ಮಹತ್ವಗಳು)

ಇಮೇಜ್
ಶಿವತಾಂಡವ ಸ್ತೋತ್ರ ಉಪಯೋಗ (ಶಿವ ತಾಂಡವ ಸ್ತೋತ್ರದ ಮಹತ್ವಗಳು) ಭಕ್ತರಿಗೆ ಶಿವ ಬೇಗನೆ ಒಲಿಯುವರು ಎಂದು ನಂಬಲಾಗಿದೆ. ಶಿವನಿಗೆ ಸಣ್ಣ ಪಾರ್ಥನೆ ಸಲ್ಲಿಸಿದರೂ ಒಲಿಯುತ್ತಾರೆ ಎನ್ನುವ ನಂಬಿಕೆಯು ಹಿಂದಿನಿಂದಲೂ ಇದೆ. ಈಶ್ವರ ದೇವರು ಒಳ್ಳೆಯ ಆರೋಗ್ಯ, ಕಾಯಿಲೆಗಳ ನಿವಾರಣೆ ಮಾಡುವರು. ಶಿವನ ಭಕ್ತರು ಮಂತ್ರ ಜಪಿಸುವ ಮೂಲಕ ಮತ್ತಷ್ಟು ಶ್ರೀಮಂತ ಹಾಗೂ ಆರೋಗ್ಯವಂತರಾಗಬಹುದು. ಹೀಗಾಗಿ ಹಿಂದೂ ಧರ್ಮದಲ್ಲಿ ಈಶ್ವರ ದೇವರಿಗೆ ಭಕ್ತರು ಹೆಚ್ಚು ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಶಿವನ ಒಲಿಸಿಕೊಳ್ಳಲು ಹಲವಾರು ಮಂತ್ರಗಳು ಇವೆ. ಇಲ್ಲೊಂದು ಸ್ತೋತ್ರವಾಗಿರುವ ಶಿವ ತಾಂಡವ ಸೋತ್ರವನ್ನು ಪಠಿಸುವುದರಿಂದ ಕೇವಲ ಈಶ್ವರ ದೇವರನ್ನು ಮಾತ್ರವಲ್ಲದೆ ಲಕ್ಷ್ಮೀ ದೇವಿಯನ್ನು ಕೂಡ ಒಲೈಸಿ ಕೊಳ್ಳಬಹುದು. ಶಿವ ತಾಂಡವ ಸ್ತೋತ್ರವು ರಾವನನಿಗೆ ಮೀಸಲಾಗಿದೆ. ಯಾಕೆಂದರೆ ಇದನ್ನು ರಚಿಸಿದವರು ಆತ ಮತ್ತು ಶಿವನನ್ನು ಒಲಿಸಿಕೊಳ್ಳಲು ಇದನ್ನು ಆತ ಜಪಿಸಿದ್ದ. ಸಂಪತ್ತು ಮತ್ತು ಐಶ್ವರ್ಯ ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಸಂಪತ್ತು ಮತ್ತು ಎಲ್ಲಾ ರೀತಿಯ ಐಷಾರಾಮವು ನಿಮ್ಮದಾಗುವುದು. ಲೌಕಿಕ ಜೀವನದಲ್ಲಿ ನಿಮ್ಮ ಯಾವುದೇ ಆಸೆಗಳು ಈಡೇರದೆ ಇರುವುದಿಲ್ಲ. ಅದಾಗ್ಯೂ, ನಿಮ್ಮ ಇಚ್ಛೆಗೆ ಅನುಗುಣವಾಗಿ ಇದನ್ನು ಜಪಿಸುವ ರೀತಿಯು ಭಿನ್ನವಾಗಿರುತ್ತದೆ. ಸಂಸಾರಿಗಳೀಗೆ ಇದು ಲಾಭಕಾರಿ ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಕೌಟುಂಬಿಕ ಜೀವನದಲ್ಲಿ ಶಾಂತಿ ...

ವ್ಯವಹಾರಕ್ಕೆ ಉಪಯುಕ್ತವಾದ ಮತ್ತು ಮುಖ್ಯವಾದ ಕೆಲವು GST ನಿಯಮಗಳು ಮತ್ತು ಪ್ರಯೋಜನಗಳು:-

ಇಮೇಜ್
ವ್ಯವಹಾರಕ್ಕೆ ಉಪಯುಕ್ತವಾದ ಮತ್ತು ಮುಖ್ಯವಾದ ಕೆಲವು GST ನಿಯಮಗಳು ಮತ್ತು ಪ್ರಯೋಜನಗಳು:- ಸರಕು ಮತ್ತು ಸೇವಾ ತೆರಿಗೆ (GST) ಎಂದರೇನು? GST ಒಂದೇ ಏಕರೂಪದ ಪರೋಕ್ಷ ತೆರಿಗೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಪರೋಕ್ಷ ತೆರಿಗೆಗಳಾದ VAT, CENVAT ಮತ್ತು ಇತರವುಗಳನ್ನು ಬದಲಿಸಲು ಪರಿಚಯಿಸಲಾಗಿದೆ. GST ಎಲ್ಲಾ ರೀತಿಯ ವ್ಯವಹಾರಗಳಿಗೆ ಅನ್ವಯಿಸುತ್ತದೆ, ಸಣ್ಣ ಅಥವಾ ದೊಡ್ಡದು. ಇದು ದೇಶದ ಅತಿ ದೊಡ್ಡ ತೆರಿಗೆ ಸುಧಾರಣೆಗಳಲ್ಲಿ ಒಂದಾಗಿದೆ. ಇಡೀ ರಾಷ್ಟ್ರವು ಏಕೀಕೃತ ತೆರಿಗೆ ರಚನೆಯನ್ನು ಅನುಸರಿಸುತ್ತದೆ. ಹೆಸರೇ ಸೂಚಿಸುವಂತೆ, ಸರಕು ಮತ್ತು ಸೇವೆಗಳೆರಡಕ್ಕೂ GST ಅನ್ವಯಿಸುತ್ತದೆ ಮತ್ತು ಕೇಂದ್ರ ಮತ್ತು ರಾಜ್ಯ ಎರಡನ್ನೂ ಪರಸ್ಪರ ಸ್ವತಂತ್ರವಾಗಿ ಇರಿಸಲು ಭಾರತವು GST ಯ ಡ್ಯುಯಲ್ ಸಿಸ್ಟಮ್ ಅನ್ನು ಅನುಸರಿಸುತ್ತದೆ. ಜಿಎಸ್ಟಿ ಕೌನ್ಸಿಲ್ ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿರುತ್ತದೆ ಮತ್ತು ಇದು ವಿವಿಧ ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡಿರುತ್ತದೆ. GST ಯನ್ನು 5%, 12%, 18%, ಮತ್ತು 28% ರ ವಿವಿಧ ವರ್ಗಗಳ ಉತ್ಪನ್ನಗಳು ಮತ್ತು ಸೇವೆಗಳಿಗೆ ತೆರಿಗೆ ಸ್ಲ್ಯಾಬ್‌ಗಳೊಂದಿಗೆ ನಾಲ್ಕು ಹಂತದ ತೆರಿಗೆ ರಚನೆಯಾಗಿ ರೂಪಿಸಲಾಗುವುದು. ಅಕ್ಕಿ, ಗೋಧಿಯಂತಹ ಹೆಚ್ಚಿನ ಅಗತ್ಯ ವಸ್ತುಗಳಿಗೆ 0% ದರವನ್ನು ಇರಿಸಲಾಗುತ್ತದೆ. GST ಬದಲಿಸಿದ ಪರೋಕ್ಷ ತೆರಿಗೆಗಳು ಯಾವುವು? ಇಡೀ ರಾಷ್ಟ್ರಕ್ಕೆ ಏಕರೂಪದ ತೆರಿಗೆಯಾಗಿ ವಿನ್ಯಾಸಗೊಳ...

ಮಂಗಳ ಗೌರಿ ವ್ರತ, ವಿಧಾನ, ಮಂತ್ರ, ಅರ್ಥ, ಕಥೆ

ಇಮೇಜ್
ಮಂಗಳ ಗೌರಿ ವ್ರತ ಶ್ರಾವಣ ಮಾಸದ ಮಂಗಳ ಗೌರಿ ವ್ರತದಿಂದ ನಿಮ್ಮ ಬಾಳು ಹಸನಾಗುತ್ತೆ, ಶ್ರಾವಣ ಮಾಸ(Shravana Masa) ಬಂತೆಂದರೆ ಒಂದರ ಮೇಲೊಂದು ಹಬ್ಬಗಳು ಶುರುವಾಗುತ್ತವೆ. ಸೋಮವಾರದಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರಾವಣ ಸೋಮವಾರ ಮುಗಿಸಿದ ನಂತರ ಮಂಗಳವಾರ ಮಂಗಳ ಗೌರಿ ವ್ರತ(Mangala Gowri Vratha) ಮಾಡಲಾಗುತ್ತೆ. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳ ಗೌರಿ ವ್ರತ ಆಚರಿಸಲಾಗುತ್ತೆ. ಮದುವೆಯಾದ ಹೊಸ ಮದುಮಗಳು ಈ ವ್ರತ ಮಾಡುವುದರಿಂದ ಅನೇಕ ಫಲಗಳಿವೆ. ಮಂಗಳ ಗೌರಿ ವ್ರತವನ್ನು ಗಂಡನ ದೀರ್ಘಾಯುಷ್ಯ, ಸಂತೋಷದಾಯಕ ದಾಂಪತ್ಯ ಜೀವನಕ್ಕಾಗಿ ಆಚರಿಸಲಾಗುತ್ತೆ. ಅಷ್ಟೇ ಅಲ್ಲದೆ ಈ ದಿನ ಗೌರಿಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ, ಸಂತೋಷ, ಆರೋಗ್ಯ ವೃದ್ಧಿಯಾಗುತ್ತೆ. ಮಂಗಲ್ಯ ದೋಷ ನಿವಾರಣೆಗೂ ಈ ವ್ರತ ಮಾಡುವುದರಿಂದ ಉತ್ತಮ ಫಲಿತಾಂಶವಿದೆ. ಮದುವೆಯಾದ ಮೊದಲ 5 ವರ್ಷಗಳವರೆಗೆ ಮಹಿಳೆಯರು ಈ ವ್ರತವನ್ನು ಆಚರಿಸುತ್ತಾರೆ. ಈ ವರ್ಷ ಆಗಸ್ಟ್ 10, 17, 24 ಹಾಗೂ 31ರಂದು ಶ್ರಾವಣ ಮಂಗಳವಾರ ಬಂದಿದೆ. ಮಂಗಳ ಗೌರಿ ಪೂಜಾ ವಿಧಿ ಮಹಿಳೆಯರು ಗೌರಿ ಆವಾಹನ ಮಂತ್ರ, ಗಣಪತಿ ಆವಾಹನ ಮಂತ್ರ ಮತ್ತು ಇನ್ನು ಹಲವು ದೇವರುಗಳ ಆವಾಹನ ಮಂತ್ರ ಪಠಿಸಬೇಕು. ಮಹಿಳೆಯರು ಸಾಂಪ್ರಧಾಯಿಕ ಉಡುಗೆ ತೊಟ್ಟು, ಹೆಣೆಗೆ ಕುಂಕುಮ, ಕೆನ್ನೆಗೆ ಅರಶಿಣ, ಕಪ್ಪು ಬಳೆ ಹಾಗೂ ತಲೆಗೆ ಹೂ ಮುಡಿದು ದೇವರಿಗೆ ಮೆಚ್ಚಿಗೆಯಾಗುವಂತೆ ಅಲಂಕೃತರಾಗಬೇಕು. ದೇವರಿಗೆ ...

ರಾವಣನ ಕುರಿತು ಸಂಪೂರ್ಣ ಪ್ರಶ್ನೋತ್ತರಗಳು

ಇಮೇಜ್
1) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು? ಉತ್ತರ : ಕುಭೆರ 2) ವಿಶ್ರವಸು ಹಾಗು ಕೈಕಸಿಯ ಮಗ ಯಾರು? ಉತ್ತರ : ರಾವಣ 3) ಕೈಕಸಿ ಯಾರ ಮಗಳು? ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು 4) ಸುಮಾಲಿಯ ಸೋದರರು ಎಷ್ಟು ಮಂದಿ? ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ) 5) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು? ಉತ್ತರ: ಸುಖೇಶನೆಂಬ ರಾಕ್ಷಸ 6) ರಾವಣನ ಮೂಲ ಹೆಸರೇನು? ಉತ್ತರ : ದಶಕಂಠ/ ದಶಾನನ 7) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು? ಉತ್ತರ: ತನಗೆ ಸಾವು ಬರಬಾರದು ಎಂದು 8) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು? ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ 9) ರಾವಣ ಕೇಳಿದವರ ದೊರೆಯಿತೇ? ಉತ್ತರ : ಇಲ್ಲ 10) ರಾವಣನು ಬದಲಿಯಾಗಿ ಕೇಳಿದ ವರ ಯಾವುದು? ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ 11) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ? ಉತ್ತರ : ಮನುಷ್ಯ 12) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ? ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ 13) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು? ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು 14) ಕುಂಭಕರ್ಣನಿಗೆ ನಿದ...

ಮಂಗಳಾರತಿ ಮತ್ತು ತೀರ್ಥ ಇವುಗಳ ವಿಶೇಷತೆ

ಇಮೇಜ್
ಮಂಗಳಾರತಿ ಮತ್ತು ತೀರ್ಥ.... ಪ್ರಸಾದ ಇಲ್ವೆ....?!! ಎಂದು ಮಾತ್ರ ಕೇಳ್ಬೇಡಿ....... ಇಲ್ಲಿ ಮೇಲಿನೆರೆಡು ವಿಚಾರಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇನೆ..... ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿಯಿತ್ತಾಗ ಮಂಗಳಾರತಿ ಮತ್ತು ತೀರ್ಥ ತೆಗೆದುಕೊಳ್ಳದೆ ಬರುವವರು ವಿರಳ. ಸುಮ್ಮನೆ ಕೈನೀಡಿ ತೆಗೆದುಕೊಳ್ಳುವವರೂ ಇದ್ದೇವೆ. ಹಾಗಾದರೆ ಅವುಗಳನ್ನೇಕೆ ತೆಗೆದುಕೊಳ್ಳಬೇಕು ? ಮಂಗಳಾರತಿಯೇ ಮೊದಲೇಕೆ ? ತೀರ್ಥ ನಂತರವೇಕೆ ? ಈ ಪ್ರಶ್ನೆಗಳಿಗೆ ಇಲ್ಲಿದೆ ನನ್ನದೊಂದು ವಿಚಾರ... ದೇವರ ಶಿಲಾ ಮೂರ್ತಿಗೆ (ಅಥವಾ ಲಿಂಗಕ್ಕೆ) ಜಲಾಭಿಷೇಕ ಮಾಡುವುದು ನಿತ್ಯವಿಧಿಗಳಲ್ಲಿ ಒಂದು. ಅಂತಹ ದೇವರ ಮೂರ್ತಿ ಅಥವಾ ಲಿಂಗವನ್ನು ನಿರ್ದಿಷ್ಟ ಶಿಲೆಗಳಿಂದ ಮಾಡಿರುತ್ತಾರೆ. ಸಾಮಾನ್ಯವಾಗಿ ’ಸಾಲಿಗ್ರಾಮ ಶಿಲೆ’ , ’ಕೃಷ್ಣ ಶಿಲೆ’ ಹಾಗೂ ’ನವರತ್ನ ಶಿಲೆ’ ಗಳಿಂದ ಕೆತ್ತಲ್ಪಟ್ಟ ಮೂರ್ತಿಗಳಿರುತ್ತವೆ. (ಗ್ರಾನೈಟ್, ಬಳಪದ ಕಲ್ಲು, ಇನ್ನಿತರ ಶಿಲೆಗಳು ಶಾಸ್ತ್ರೋಕ್ತ ರೀತಿ ಪೂಜಾರ್ಹವಲ್ಲ!.) ಈ ಶಿಲೆಗಳು ಅಪೂರ್ವವಾದ ಶಕ್ತಿಯನ್ನು ಹೊಂದಿರುವುದರ ಜೊತೆಗೆ ಸಾಕಷ್ಟು ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಂತಹ ಶಿಲೆಯ ಮೇಲೆ ಬಿದ್ದ ನೀರು ತನ್ನ ಜೊತೆ ಎಲ್ಲಾ ಸತ್ವಗುಣಗಳನ್ನು ತಂದಿರುತ್ತದೆ. ಅಂತಹ ನೀರನ್ನು ಒಂದು ಪಾತ್ರೆಯಲ್ಲಿ ಹಿಡಿದಿಡಲಾಗುತ್ತದೆ. (ಇಲ್ಲಿ ಹಾಲು, ಮೊಸರು, ಇತ್ಯಾದಿಗಳಿಂದ ಕೂಡಿದ ಪಂಚಾಮೃತವನ್ನು ಪ್ರಸ್ತಾಪಿಸುವುದಿಲ್ಲ. ಕಾರಣ ಅದು ಶುಧ್ಧ ತೀರ್...