ರಾವಣನ ಕುರಿತು ಸಂಪೂರ್ಣ ಪ್ರಶ್ನೋತ್ತರಗಳು

1) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು?
ಉತ್ತರ : ಕುಭೆರ
2) ವಿಶ್ರವಸು ಹಾಗು ಕೈಕಸಿಯ ಮಗ ಯಾರು?
ಉತ್ತರ : ರಾವಣ
3) ಕೈಕಸಿ ಯಾರ ಮಗಳು?
ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು
4) ಸುಮಾಲಿಯ ಸೋದರರು ಎಷ್ಟು ಮಂದಿ?
ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ)
5) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು?
ಉತ್ತರ: ಸುಖೇಶನೆಂಬ ರಾಕ್ಷಸ
6) ರಾವಣನ ಮೂಲ ಹೆಸರೇನು?
ಉತ್ತರ : ದಶಕಂಠ/ ದಶಾನನ
7) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು?
ಉತ್ತರ: ತನಗೆ ಸಾವು ಬರಬಾರದು ಎಂದು
8) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು?
ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ
9) ರಾವಣ ಕೇಳಿದವರ ದೊರೆಯಿತೇ?
ಉತ್ತರ : ಇಲ್ಲ
10) ರಾವಣನು ಬದಲಿಯಾಗಿ ಕೇಳಿದ ವರ ಯಾವುದು?
ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ

11) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ?
ಉತ್ತರ : ಮನುಷ್ಯ
12) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ?
ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ
13) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು?
ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು
14) ಕುಂಭಕರ್ಣನಿಗೆ ನಿದ್ರಾ ವರವನ್ನು ಅವನ ನಾಲಿಗೆಯಲ್ಲಿ ಕುಳಿತು ಕೇಳಿಸಿದ್ದು ಯಾರು ?
ಉತ್ತರ : ಸರಸ್ವತಿ ದೇವಿ
15) ವಿಭೀಷಣನು ಬ್ರಹ್ಮದೇವನಲ್ಲಿ ಕೇಳಿದ ವರವೇನು?
ಉತ್ತರ : ತನ್ನ ಮನಸ್ಸು ಧರ್ಮದಿಂದ ಎಂದಿಗೂ ವಿಚಲಿತವಾಗದ ಇರಲಿ ಎಂದು ಕೇಳಿದ
16) ವಿಭೀಷಣನಿಗೆ ಬ್ರಹ್ಮದೇವರು ಕೊಟ್ಟ ವರವೇನು?
ಉತ್ತರ : ಧರ್ಮಾತ್ಮ ನಾಗಿರು ಜೊತೆಗೆ ಅಮರತ್ವವನ್ನು ( ಚಿರಂಜೀವಿ) ದಯಪಾಲಿಸಿದ
17) ರಾವಣನಿಗೆ ಕುಬೇರನು ಏನಾಗಬೇಕು?
ಉತ್ತರ : ಅಣ್ಣ
18) ಬ್ರಹ್ಮನಿಂದ ವರ ಪಡೆದ ರಾವಣನು ಮೊದಲು ಆಕ್ರಮಣ ಮಾಡಿದ್ದು ಯಾರ ಮೇಲೆ ?
ಉತ್ತರ : ಕುಬೇರನ ಮೇಲೆ
19) ಕುಬೇರನ ಮೇಲೆ ಆಕ್ರಮಿಸಲು ಹೇಳಿದ್ದು ಯಾರು ?
ಉತ್ತರ : ಕೈಕಸಿ
20) ಕೈಕಸಿಗೆ ಕುಬೇರನ ಮೇಲೆ ಹೊಟ್ಟೆಯುರಿ ಏಕೆ ?
ಉತ್ತರ : ಸವತಿಯ ಮಗನ ಸಂಪತ್ತನ್ನು ನೋಡಿ

21) ಕುಬೇರನಿಂದ ರಾವಣ ವಶಪಡಿಸಿಕೊಂಡಿದ್ದು ಏನನ್ನು
ಉತ್ತರ : ಲಂಕೆ ಮತ್ತು ಪುಷ್ಪಕ ವಿಮಾನ
22) ಮಂಡೋದರಿ ಯಾರ ಮಗಳು ?
ಉತ್ತರ : ಮಯ ಎಂಬ ರಾಕ್ಷಸನ ಮಗಳು
23) ಮಂಡೋದರಿಯ ತಾಯಿ ಯಾರು?
ಉತ್ತರ : ಹೇಮಾ ಎಂಬ ಅಪ್ಸರೆ
24) ಕುಂಭಕರ್ಣನ ಹೆಂಡತಿ ಯಾರು?
ಉತ್ತರ : ವಿದ್ಯುಜ್ಜಿಹ್ವೆ
25) ವಿಭೀಷಣನ ಪತ್ನಿ ಯಾರು?
ಉತ್ತರ : ಸುರಮೆ ಎಂಬ ಗಂಧರ್ವ ಕನ್ಯೆ
26) ವಿಭೀಷಣನ ಮಾವ ಯಾರು ?
ಉತ್ತರ : ಶೈಲೂಷ
27) ಯಾರ ಮಾತಿಗೆ ಬೆಲೆಕೊಟ್ಟು ಲಂಕೆಯನ್ನು ರಾವಣನಿಗೆ ಬಿಟ್ಟುಕೊಟ್ಟನು?
ಉತ್ತರ : ತಂದೆ ವಿಶ್ರವಸುವಿನ ಮಾತಿಗೆ
28) ಕುಬೇರನು ಲಂಕೆಯನ್ನು ಬಿಟ್ಟ ನಂತರ ಎಲ್ಲಿ ನೆಲೆಸಿದನು?
ಉತ್ತರ : ಅಲ್ಕ ನಗರಿಯಲ್ಲಿ
29) ಅಲಕಾ ನಗರಿಯು ಯಾವ ನದಿಯ ತೀರದಲ್ಲಿ ಇತ್ತು ?
ಉತ್ತರ : ಮಂದಾಕಿನಿ
30) ರಾವಣನಿಗೆ ವಾನರರಿಂದ ಸೋಲಾಗಲಿ ಎಂದು ಶಪಿಸಿದ್ದರು ಯಾರು ?
ಉತ್ತರ : ನಂದಿಕೇಶ್ವರ

31) ದಶಾನನಿಗೆ ರಾವಣ ಎಂಬ ಹೆಸರು ಬಂದಿದ್ದು ಯಾರಿಂದ ?
ಉತ್ತರ : ಶಿವನಿಂದ
32) ಕುಬೇರನ ಮಗ ಯಾರು?
ಉತ್ತರ : ನಳಕೂಬರ
33) ಹಿಮ ಪರ್ವತದಲ್ಲಿ
ತಪಸ್ಸು ಮಾಡುತ್ತಿದ್ದ ಕುಶಧ್ವಜನ ಮಗಳು ಯಾರು?
ಉತ್ತರ : ವೇದವತಿ
34) ವೇದವತಿ ಯಾರ ಅವತಾರ ?
ಉತ್ತರ : ಲಕ್ಷ್ಮೀದೇವಿ
35) ವೇದವತಿಯು ಯಾವ ಅಪೇಕ್ಷೆಯಿಂದ ತಪಸ್ಸು ಮಾಡುತ್ತಿದ್ದಳು ?
ಉತ್ತರ : ಶ್ರೀಹರಿಯನ್ನು ಮದುವೆಯಾಗುವ ಇಚ್ಛೆಯಿಂದ
36) ವೇದವತಿಯನ್ನು ಕಂಡು ಮೋಹಿತನಾದ ರಾಕ್ಷಸ ಯಾರು ?
ಉತ್ತರ : ರಾವಣ
37) ಖರ ದೂಷಣರ ಸಂಹಾರದ ವಿಷಯವನ್ನು ರಾವಣನಿಗೆ ಮೊದಲು ಹೆಳಿದ್ದು ಯಾರು ?
ಉತ್ತರ : ಅಕಂಪನ ಎಂಬ ರಾಕ್ಷಸ
38) ವೇದವತಿ ರಾವಣನಿಗೆ ಕೊಟ್ಟ ಶಾಪವೇನು?
ಉತ್ತರ : ಬಲತ್ಕಾರದಿಂದ ಯಾವುದಾದರೂ ಹೆಣ್ಣನ್ನು ಪಡೆಯಲು ಪರ್ಯತ್ನಿಸಿದ ಮರುಕ್ಷಣವೇ ನಿನಗೆ ಸಾವು ಬರಲಿ ಎಂದು ಶಪಿಸಿದ್ದಳು
39) ವೇದವತಿಯು ಮುಂದಿನ ಜನ್ಮದಲ್ಲಿ ಯಾರಾಗಿ ಹುಟ್ಟಿದ್ದಳು ?
ಉತ್ತರ : ಸೀತೆಯಾಗಿ
40) ಶೂರ್ಪನಕಿಯ ಪತಿ ಯಾರು?
ಉತ್ತರ : ಕಾಲಕೇಯನೆಂಬ ರಾಕ್ಷಸ‌

41) ಕಾಲಕೇಯನನ್ನು ಕೊಂದಿದ್ದು ಯಾರು ?
ಉತ್ತರ : ರಾವಣ
42) ರಾವಣ ಕಾಲಕೇಯನನ್ನು ಕೊಂದಿದ್ದು ಏಕೆ?
ಉತ್ತರ : ಯುದ್ದ ಮಾಡುವಾಗ ತಪ್ಪಿ ಕಾಲಕೇಯನ‌ ಮೇಲೆ ಅಸ್ತ್ರ ಪ್ರಯೋಗಿಸಿಬಿಟ್ಟಿದ್ದ
43) ಮಾರಿಚ ಯಾರು ?
ಉತ್ತರ : ರಾವಣನ ಸೋದರ ಮಾವ
44) ಮಾರಿಚನಿಗೆ ಯಾವ ರೂಪ ಧರಿಸಿ ಸೀತೆಯ ಮುಂದೆ ಸುಳಿದಾಡಲು ರಾವಣ ಹೆಳಿದ?
ಉತ್ತರ : ಮಾಯಾಮೃಗದ ರೂಪ
45) ಸೀತೆ ಮಾಯಾಮೃಗವನ್ನು ನೋಡಿ ಏನು ಹೇಳಿದಳು ?
ಉತ್ತರ : ತನಗೆ ಈಗಿಂದೀಗಲೇ ಮಾಯಾಮೃಗ ಬೇಕೆಂದು ಕೆಳಿದಳು
46) ಮಾರಿಚ ಸಾಯುವ ಮೊದಲು ಏನೆಂದು ಉದ್ಗರಿಸಿದ ?
ಉತ್ತರ : ಹಾ ಲಕ್ಷ್ಮಣ ಹಾ ಸಿತಾ
47) ಸಿತೆಯನ್ನು ರಾವಣ ಅಪಹರಿಸಿಕೊಂಡು ಹೊಗುವಾಗ ಋಷ್ಯಮೂಕ ಪರ್ವತದ ಮೇಲೆ ಕಂಡದ್ದು ಯಾರನ್ನ?
ಉತ್ತರ : ವಾನರ‌ ಸೈನ್ಯ
48) ವೃದ್ಧ ಸಂಪಾತಿಯ ಮಗ ಯಾರು?
ಉತ್ತರ: ಸುಪಾರ್ಶ್ವ
49) ಸೂಪರ್ಶ್ವನು ತಂದೆಗೆ ಹೇಳಿದ್ದ ರಹಸ್ಯ ವಿಷಯವೇನು?
ಉತ್ತರ : ಸೀತೆಯನ್ನು ರಾವಣನು ಅಶೋಕವನದಲ್ಲಿ ಕೂಡಿಟ್ಟಿದ್ದನಂಬ ವಿಷಯ ಹೇಳಿದ.
50) ಸೀತೆಯ ವಿಷಯ ಸುಪಾರ್ಶ್ವವನಿಗೆ ತಿಳಿದುದ್ದು ಹೇಗೆ ?
ಉತ್ತರ : ಆಹಾರ ತರಲು ರಾವಣನ ನಗರಿಗೆ ಹೋದಾಗ, ಬಲು ದೂರದಿಂದಲೇ ಅವನ ತೀಕ್ಷ್ಣ ದೃಷ್ಟಿಗೆ ಸೀತೆ ಕಂಡಿದ್ದಳು.

51) ರಾಹುವಿನ ತಾಯಿ ಯಾರು?
ಉತ್ತರ : ಸಿಂಹಿಕೆ
52) ರಾವಣನು ಸಮುದ್ರದಲ್ಲಿ ಯಾರನ್ನು ಕಾವಲು ನಿಲ್ಲಿಸಿದ್ದನು?
ಉತ್ತರ ‌: ಸಿಂಹಕ್ಕೆಯನ್ನು
53)ಸಿಂಹಿಕೆಯ ಕೆಲಸವೇನು?
ಉತ್ತರ ; ಸಮುದ್ರದ ಮೇಲೆ ಹಾರುವ ಯಾವ ವಸ್ತುವಿನ ನೆರಳನ್ನೇ ಆಗಲಿ ತಿಂದು ಬಿಡುವುದು!
54) ನೆರಳನ್ನು ತಿಂದಾಗ ಏನಾಗುತ್ತದೆ?
ಉತ್ತರ: ನೆರಳಿನೊಂದಿಗೆ ಆ ವ್ಯಕ್ತಿಯೂ/ ವಸ್ತುವೂ ಸಿಂಹಿಕೆಯ ಬಾಯಿಯೊಳಗೆ ಬಂದು ಬೀಳುತ್ತದೆ.
55) ರಾವಣನ ಅರಮನೆಯಲ್ಲಿ ಯಾರನ್ನು ಕಂಡ ಹನುಮಂತನು ಸೀತಾದೇವಿಯನ್ನು ತಪ್ಪಾಗಿ ತಿಳಿದು?
ಉತ್ತರ : ಮಂಡೋದರಿ
56) ಸೀತೆಯು ರಾವಣನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಿದ್ದಳು?
ಉತ್ತರ : ಒಂದು ಹುಲ್ಲುಕಡ್ಡಿಯನ್ನು ಮುಂದಿಟ್ಟುಕೊಂಡು ಅದರೊಂದಿಗೆ ಮಾತನಾಡುತ್ತಿದ್ದಳು.
57) ಭೂಮಿಯ ಮೇಲಿನ ಅತ್ಯಂತ ಸುಂದರವಾದ ಉದ್ಯಾನವನ ಯಾವುದಾಗಿತ್ತು?
ಉತ್ತರ : ರಾವಣನ ಅಶೋಕವನ
58) ಅಶೋಕವನದಲ್ಲಿ ಯಾವೆಲ್ಲ ಮರಗಳು ಇದ್ದವು?
ಉತ್ತರ : ಭೂಮಿಯ ಮೇಲಿನ ಅತ್ಯಂತ ರಮಣೀಯ ಮರಾಗಿಡಗಳೆಲ್ಲವೂ ಅಶೋಕವನದಲ್ಲಿತ್ತು
59) ಆಂಜನೇಯನ ಅಶೋಕವನಕ್ಕೆ ಕಾಲಿಟ್ಟಾಗ ಆ ಪರಿಸರದ ತುಂಬೆಲ್ಲ ಯಾವ ಬಣ್ಣದ ಹೂವುಗಳು ಅರಳಿದ್ಧವು?
ಉತ್ತರ :ಬಿಳಿಯ ಬಣ್ಣದ ಹೂಗಳು
60) ಆಂಜನೇಯನಿಗೆ ಬಿಳಿಯ ಬಣ್ಣದ ಹೂಗಳು ಹೇಗೆ ಕಂಡವು?
ಉತ್ತರ : ಬಿಳಿಯ ಬಣ್ಣದ ಹೂಗಳು.

61) ಬಿಳಿಯ ಹೂಗಳು ಕೆಂಪಗೆ ಕಂಡುದು ಹೇಗೆ?
ಉತ್ತರ : ರಾವಣನ ಮೇಲೆ ಕೆಂಡದಂಥಾ ಕೋಪದಿಂದ ಆಂಜನೆಯನಿಗೆ ಬಿಳಿಯ ಹೂಗಳೆಲ್ಲವೂ ಕೆಂಪಗೆ ಕಂಡಿದ್ದವು.
62) ದುಃಖತಪ್ತ ಸೀತೆ ಇದ್ದದ್ದು ಎಲ್ಲಿ ?
ಉತ್ತರ: ಅಶೋಕವನದಲ್ಲಿ
63) ಅಶೋಕವನ ಎಂದರೇನು?
ಉತ್ತರ: ಶೋಕವೇ ಇಲ್ಲದ ಅತ್ಯಂತ ಸುಂದರ ಉಧ್ಯಾನವನವೇ ಅಶೋಕವನ
64) ಅಶೋಕವೃಕ್ಷಕ್ಕಿರುವ ಇಮ್ನೊಂದು ಹೆಸರೇನು?
ಉತ್ತರ : ಶಿಂಶಪಾವೃಕ್ಷ
65) ಹೊರಡುತ್ತೆನೆಂದು ಹೊರಟ ಹನುಮ ಅಶೋಕವನವನ್ನು ದ್ವಂಸ ಏಕೆ ಮಾಡಿದ ?
ಉತ್ತರ: ತನ್ನ ಪರಾಕ್ರಮ ರಾವಣನಿಗೆ ತಿಳಿಯಲಿ ಎಂದು!
66) ರಾವಣನು ಅಂಕೆಯಿಲ್ಲದ ಕಪಿಯನ್ನು ಸೆರೆಹಿಡಿದು ತಾ ಎಂದು ಯಾರನ್ನು ಕಳುಹಿಸಿದ?
ಉತ್ತರ : ತನ್ನ ಕಿರಿಯ ಪುತ್ರ ಅಕ್ಷಕುಮಾರನನ್ನು ಕಳಿಸಿದ
67) ಅಕ್ಷಕುಮಾರನ ಸ್ಥಿತಿ ಏನಾಯಿತು?
ಉತ್ತರ: ಆಂಜನೆಯನ ಕೈಯಲ್ಲಿ ಸಂಹಾರವಾದ
68) ರಾವಣನ ಮತ್ತೊಬ್ಬ ಮಗನ ಹೆಸರೇನು?
ಉತ್ತರ: ಇಂದ್ರಜಿತ್
69) ಇಂದ್ರಜೀತ್ ಎಂಬ ಹೆಸರು ಅವನಿಗೆ ಏಕೆ ಬಂತು?
ಉತ್ತರ : ಇಂದ್ರನನ್ನೇ ಸೋಲಿಸಿದ ಕೀರ್ತಿಯಿಂದ ಅವನಿಗೆ ಆ ಹೆಸರು ಬಂತು
70) ಕಲಿಯುಗದಲ್ಲಿ ಶಿವಭಕ್ತ ರಾವಣನ ಅಭಿಮಾನಿ ಯಾರು?
ಉತ್ತರ : ಅದು ನಿಮಗೆ ಗೊತ್ತಿಲ್ಲದೆ ನೀವೇ ಆಗಿದ್ದೀರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೇಡರ ದಾಸಿಮಯ್ಯನವರ ವಚನಗಳು

ಸರ್ವಜ್ಞನ ವಚನಗಳು