ಪೋಸ್ಟ್‌ಗಳು

ಜನವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

New Year Day , ಆಚರಣೆಗೆ ಬಂದದ್ದು ಹೇಗೆ ಎನ್ನುವುದು ನಾವು ಭಾರತೀಯರು ತಿಳಿಲೇಬೇಕಾದ ವಿಷಯ

ಇಮೇಜ್
ಜನೆವರಿ 1 new year day , ಆಚರಣೆಗೆ ಬಂದದ್ದು ಹೇಗೆ ಎನ್ನುವುದು ನಾವು ಭಾರತೀಯರು ತಿಳಿಲೇಬೇಕಾದ ವಿಷಯ ಇದು.  ತಪ್ಪದೆ ಓದಿ 1753ರಲ್ಲಿ England ನಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು , new year day ಜನ್ಮವನ್ನು ಜಾಲಾಡುತ್ತ ಹೋದರೆ ಆಶ್ಚರ್ಯಕಾರಿ ವಿಷಯಗಳು ಹೊರ ಹೊಮ್ಮುತ್ತವೆ.  ನಮ್ಮ ಧರ್ಮದಲ್ಲಿ ಕಾಲ ನಿರ್ಣಯವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯನ್ನಾಧರಿಸಿ , ತಿಥಿ , ವಾರ, ಮಾಸ, ಸಂವತ್ಸರ ಗಳನ್ನು ನಿಖರವಾಗಿ ಸಿದ್ದಗೊಳಿಸುವ ಪಂಚಾಗಕ್ಕೆ ಸಾವಿರಾರು ವರ್ಷಗಳ ಇತಿಹಾಸ ವಿದೆ.  ರೊಮ್ ಸಾಮ್ರಾಜ್ಯದ ಕಾಲ ನಿರ್ಣಯ ಪದ್ದತಿ ಹೆಗಿತ್ತು ?  ಒಂದು ವರ್ಷಕ್ಕೆ ಹತ್ತೆ ತಿಂಗಳೆಂದು ರೊಮನ್ನರು ನಂಬಿದ್ದರು. 'ಭಾರತಿಯ ಕಾಲಶಾಸ್ತ್ರ ನಿಣ೯ಯ ಪದ್ದತಿಯಿಂದ ಕಲಿತು ರೋಮನ್ನರು ರೊಮಕ್ಯಾಲೆಂಡರಗೆ ಜನೆವರಿ ಮತ್ತು ಫೆಬ್ರವರಿ ಎರಡು ತಿಂಗಳನ್ನು ಸೆರಿಸಿ 10 ನ್ನು12 ಕ್ಕೆ ಎರಿಸಿದರು.  ಜೂನ ತಿಂಗಳಲ್ಲಿ 29 ದಿವಸಗಳು ಮಾತ್ರ ಇದ್ದು ಅದನ್ನು 30 ಕ್ಕೆ ಏರಿಸಿದ , ನಂತರ ರೋಮ್ ದೋರೆ 'ಜೂಲಿಯಸ್ ಸೀಸರ್' ಆತನ ಹೆಸರಿನಲ್ಲಿಯೇ "ಜುಲೈ" ತಿಂಗಳನ್ನು ನಾಮಕರಣಗೊಳಿಸಿದ. ಆತನ ಉತ್ತರಾಧಿಕಾರಿ"ಆಗಸ್ಟನ್" ಆತನ ಹೆಸರಿನಲ್ಲಿ ಮುಂದಿನ ತಿಂಗಳನ್ನು 'ಆಗಸ್ಟ' ಎಂದು ಕರೆದ.  ಭಾರತಿಯ ಶಾಸ್ತ್ರದಿಂದ ರೋಮನ್ನರು ಅವರ ಮುಂದಿನ ತಿಂಗಳುಗಳನ್ನು ,  ಸೆಪ್ಟೆಂಬರ (ಸಂಸ್ಕೃತ - ಸಪ್ತ = 7 ನೇ + ಅಂಬರ = ತಿಂಗಳು...

ಹಿರಿಯರ ಅನುಭವದ ಕಿವಿ ಮಾತುಗಳು..

ಇಮೇಜ್
ನಾನೂ ಕೇಳಿದ್ದೇನೆ, ನೀವೂ ಕೇಳಿರಬಹುದು..  1) ಸೋಮವಾರ ತಲೆಗೆ ಎಣ್ಣೆ ಹಚ್ಚಬೇಡ.  2) ಒಂಟಿ ಕಾಲಲ್ಲಿ ನಿಲ್ಲಬೇಡ.  3) ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ.  4) ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ.  5) ಇಡೀ ಕುಂಬಳಕಾಯಿ ಮನೆಗೆ ತರಬೇಡ.  6) ಮನೆಯಲ್ಲಿ ಉಗುರು ಕತ್ತರಿಸಬೇಡ.  7) ಮಧ್ಯಾಹ್ನ  ತುಳಸಿ ಕೊಯ್ಯಬೇಡ.  8) ಹೊತ್ತು ಮುಳುಗಿದ ಮೇಲೆ ಗುಡಿಸಬೇಡ/ತಲೆ ಬಾಚಬೇಡ .  9) ಉಪ್ಪುಮೊಸರು ಸಾಲ ಕೊಡುವುದು ಬೇಡ.  10) ಬಿಸಿ ಅನ್ನಕ್ಕೆ ಮೊಸರು ಹಾಕಬೇಡ.  11) ಊಟ ಮಾಡುವಾಗ ಮದ್ಯೆ ಮೇಲೆ ಏಳಲೇಬೇಡ.  12) ತಲೆ ಕೂದಲು ಒಲೆಗೆ ಹಾಕಬೇಡ.  13) ಹೊಸಿಲನ್ನು ತುಳಿದು ದಾಟಬೇಡ.  14) ಮನೆಯಿಂದ ಹೊರಡುವಾಗ ಕಸ ಗುಡಿಸುವುದು ಬೇಡ.  15) ಗೋಡೆ ಮೇಲೆ ಕಾಲಿಟ್ಟು ಮಲಗಬೇಡ.  16) ರಾತ್ರಿ ಹೊತ್ತಲ್ಲಿ ಬಟ್ಟೆ ಒಗೆಯಬೇಡ.  17) ಒಡೆದ ಬಳೆ ಧರಿಸಬೇಡ. 18) ಮಲಗೆದ್ದ ಚಾಪೆ ಮಡಿಸದೆ ಬಿಡಬೇಡ.    19) ಉಗುರು ಕಚ್ಚಲು ಬೇಡ. 20) ಅಣ್ಣ, ತಮ್ಮ ತಂದೆ,ಮಗ ಒಟ್ಟಿಗೆ ಒಂದೇ ದಿನ ಚೌರ ಮಾಡಿಸಬಾರದು.  21) ಒಂಟಿ ಬಾಳೆಲೆ ತರಬೇಡ. 22) ಊಟ ಮಾಡಿದ ಮೇಲೆ ಕೈ ಒಣಗಿಸಬೇಡ.  23)ಮುಸ್ಸಂಜೆ ಹೊತ್ತಲ್ಲಿ ಮಲಗಬೇಡ.  24) ಕಾಲು ತೊಳೆಯುವಾಗ ಹಿಮ್ಮಡಿ ತೊಳೆಯುವುದು ಮರೆಯಬೇಡ.  2...

ಜೀವನದಲ್ಲಿ ನಾವು ಯಾರ ಬಗ್ಗೆ ಯೋಚಿಸಬೇಕು..

ಇಮೇಜ್
                   ಒಂದು ದಿನ ಯಮಧರ್ಮರಾಯ ಒಂದು ವ್ಯಕ್ತಿಯ ಪ್ರಾಣವನ್ನು ಕೊಂಡೊಯ್ಯಲು ಭೂಮಿಗೆ ಬಂದ. ಆದರೆ ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿಯೇ ಯಮಧರ್ಮನಿಗೆ ಎದುರಾದ. ಯಮನಿಗೆ ಭೂಲೋಕ ಸುತ್ತಿ ಸುತ್ತಿ ದಾಹವಾಗಿರುತ್ತು. ಅವನಿಗೆ ಕುಡಿಯಲು ನೀರು ಕೇಳುತ್ತಾನೆ. ಸಾಯಬೇಕಾರುವ ವ್ಯಕ್ತಿಯೇ ನೀರು ಕೊಟ್ಟು ದಾಹ ತೀರಿಸುತ್ತಾನೆ             ಆದರೆ ಯಮ ಕೊಂಡೊಯ್ಯಬೇಕಾರುವ  ವ್ಯಕ್ತಿ ಅವನೇ ಎಂದು ತಿಳಿದು ಒಂದು ವರ ಕೊಡುತ್ತಾನೆ. ಏನೆಂದರೆ ಒಂದು ಹಣೆಬರಹದ ಪುಸ್ತಕ ಕೊಟ್ಟು ಇದರಲ್ಲಿ ನಿನಗೆ ಅಂತ ಒಂದು ಹಾಳೆ ಇದೆ, ನಿನಗೆ ಏನು ಬೇಕೋ ಅದನ್ನು ಬರೆದುಕೊ. ನೀನು ಏನು ಬರೆದುಕೊಂಡರೂ ನೆರವೇರುವುದು. ಇದರಲ್ಲಿ ಸಂಶಯವಿಲ್ಲ. ಆದರೆ ನೀನು ಬರೆದುಕೊಳ್ಳಲು ನಿನಗೆ ಐದು ನಿಮಿಷ ಮಾತ್ರ ಸಮಯ, ಆ ಐದು ನಿಮಿಷವೇ ನಿನಗೇ ಅತ್ಯಮೂಲ್ಯ, ಆ ಐದು ನಿಮಿಷ ದಾಟಿದ ನಂತರ ನಿನ್ನ ಹಣೆಬರಹ ಹೇಗಿರುತ್ತೋ ಹಾಗಾಗುವುದು ಎಂದು ಹೇಳಿ ಒಂದು ಪುಸ್ತಕ ಕೊಡುತ್ತಾನೆ.       ಆ ವ್ಯಕ್ತಿ ಪುಸ್ತಕ ತೆಗೆದ ತಕ್ಷಣ ಮೊದಲ ಪುಟ ಓದುತ್ತಾನೆ, ಅದರಲ್ಲಿ ನಿನ್ನ ಸ್ನೇಹಿತ ವಿದೇಶಕ್ಕೆ ಹೋಗುತ್ತಾನೆ ಎಂದಿರುತ್ತದೆ. ಅದಕ್ಕೆ ಅವನು ವಿದೇಶಕ್ಕೆ ಹೋಗಬಾರದೆಂದು ಬರೆದು ತಡೆಯುತ್ತಾನೆ.... ಮತ್ತೊಂದು ಪುಟ ತೆರೆಯುತ್ತಾನೆ ಅದರಲ್ಲಿ ಮತ್...

ಸಂಕ್ರಾಂತಿ ಹಬ್ಬ ಮತ್ತು ವಿಜ್ಞಾನ

ಇಮೇಜ್
ಸಂಕ್ರಾಂತಿ ಮತ್ತು ವಿಜ್ಞಾನ  • ಪೂರ್ವದಲ್ಲಿ ಸೂರ್ಯನ ಉದಯ ಮತ್ತು ಪಶ್ಚಿಮದಲ್ಲಿ ಅಸ್ತವಾಗುವ ಸೂರ್ಯ ಸರಿಯಾಗಿ ಹುಟ್ಟಿಮುಳುಗುವುದು ವರ್ಷದಲ್ಲಿ ಕೇವಲ ಎರಡು ದಿನ ಮಾತ್ರ. ಉಳಿದ ದಿನಗಳಲ್ಲಿ ಹೀಗೆ ಇರುವುದಿಲ್ಲ. ಇದಲ್ಲೆ ವಿಜ್ಞಾನದಲ್ಲಿ ಈಕ್ವಿನಾಕ್ಸ್‌ ಎನ್ನುತ್ತಾರೆ. ಅಂದು ಹಗಲಿರುಳನ್ನು ಸಮಾನವಾಗಿ ಅಂದರೆ 12 ಗಂಟೆ ಹಗಲು ಹಾಗೂ 12 ಗಂಟೆ ಇರುಳನ್ನು ಸರಿ ಪ್ರಮಾಣದಲ್ಲಿ ಹಂಚಿಕೊಳ್ಳುತ್ತವೆ.  • ಚಳಿಗಾಲದಲ್ಲಿ ಹಗಲು ಕಡಿಮೆ ಇದ್ದು ಇರುಳು ಜಾಸ್ತಿ ಇರುತ್ತಾದೆ. ಈ ಕಾಲದಲ್ಲಿ ಸೂರ್ಯ ದಕ್ಷಿಣದಲ್ಲಿ ಹುಟ್ಟುತ್ತಾನೆ. ಒಂದು ದಿನ ದಕ್ಷಿಣ ತುತ್ತತುದಿ ತಲುಪಿ ಮರುದಿನ ಬೆಳಗ್ಗೆ ಉತ್ತರದಲ್ಲಿ ಗೋಚರಿಸುತ್ತಾನೆ. ಅಂದರೆ ದಕ್ಷಿಣದ ಕಡೆ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿ ಉತ್ತರದಲ್ಲಿ ಕಾಣಿಸಿಕೊಳ್ಳುವ ಕಾಲವೇ ಉತ್ತರಾಯಣದ ದಿನ ಎನ್ನುತ್ತಾರೆ. ಇದು ಚಳಿಗಾಲ ಮುಗಿಯುವ ಕಾಲ ಎನ್ನಲಾಗುತ್ತದೆ.  • ಸೂರ್ಯ ತನ್ನ ಪಥವನ್ನು ಬದಲಾಯಿಸಿ ಅಂದರೆ ಉತ್ತರಕ್ಕೆ ತಿರುಗಿದ ನಂತರ ಅಲ್ಲಿಂದ ಆರು ತಿಂಗಳು ಉತ್ತರದಲ್ಲೇ ಗೋಚರಿಸುತ್ತಾನೆ. ಆಗ ಹಗಲಿನ ಪ್ರಮಾಣ ಹೆಚ್ಚಾಗಿ, ಇರುಳು ಕಡಿಮೆಯಾಗಿರುತ್ತದೆ. ಹೀಗೆ ಸೂರ್ತ ಪಥ ಬದಲಾಯಿಸಿದಾಗ ಬೇಸಿಗೆ ಆರಂಭವಾಯಿತೆಂದು ಅರ್ಥ. ಹೀಗೆ ಮುಂದೆ ಉತ್ತರದ ಕೊನೆಯ ಹಂತ ತಲುಪಿ ತನ್ನ ವಿರುದ್ಧ ದಿಕ್ಕು ಅಂದರೆ ದಕ್ಷಿಣಕ್ಕೆ ಪ್ರವೇಶಿಸಿ ಗೋಚರಿಸುತ್ತಾನೆ. ಆಗ ಬೇಸಿಗೆ ಮುಗಿದು ಮತ್ತೆ ಚಳಿಗಾಲ ಆರಂಭವಾಯ...

ಜೇಡರ ದಾಸಿಮಯ್ಯನವರ ವಚನಗಳು

ಇಮೇಜ್
​ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ! ರಾಮನಾಥ.  ಅಂತರಂಗ ಬಹಿರಂಗದಲ್ಲಿ ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ ಅಂತರಂಗದ ಜಪವ ಹೇಳುವನೊಬ್ಬ ಆಚಾರದ್ರೋಹಿ ನೋಡಾ, ರಾಮನಾಥ.  ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ, ಉಂಬ ಸದುಭಕ್ತನ ಮನೆಯಾಗಿ, ಲೋಕದ ಡಂಭಕರ ಮನೆ ಬೇಡ, ರಾಮನಾಥ  ಅಡಗ ತಿಂಬರು; ಕಣಿಕದ ಅಡಿಗೆಯಿರಲಿಕೆ. ಕುಡಿವರು ಸುರೆಯ! ಹಾಲಿರಲಿಕೆ. ಹಡದುಂಬ ವೇಶಿಯನೊಲ್ಲದೆ ಹೆರರ ಮಡದಿಗಳುಪುವ ಸತ್ತ ನಾಯ ತಿಂಬ ಹಡ್ಡಿಗರನೇನೆಂಬೆನೈ! ರಾಮನಾಥ.  ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ; ಮಟ್ಟ ಮಧ್ಯಾಹ್ನ ಸಂಕ್ರಾಂತಿ; ಮತ್ತೆ ಅಸ್ತಮಾನ ಪೌರ್ನಮಿ ಹುಣ್ಣಿಮೆ; ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ! ರಾಮನಾಥ.  ಅರ್ಥವುಂಟೆಂದು ಅಹಂಕರಿಸಿ ಮಾಡುವನ ಭಕ್ತಿ ತೊತ್ತಿನ ಕೂಟ, ತೊರೆಯನ ಮೇಳದಂತೆ. ತನು-ಮನ-ಧನದಲ್ಲಿ ವಂಚನೆಯುಳ್ಳ ಪ್ರಪಂಚಿಯ ಮನೆಯ ಕೂಳು ಶುನಕನ ಬಾಯ ಎಲುವ ಪ್ರತಿಶುನಕ ತಿಂದಂತೆ ಕಾಣಾ ! ರಾಮನಾಥ.  ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು, ಹಿಂಗಲಾಪುದೆ ಹೇಳು ಅಜ್ಞಾನವ! ಸಂಗಸುಖಮಥನದ ಅಸಂಗದಿಂದದನರಿದು ಹಿಂಗ...

ಅಕ್ಕಮಹಾದೇವಿಯ ವಚನಗಳು

ಇಮೇಜ್
೧ ಚಿನ್ನದ ಸಂಕೋಲೆಯಾದಡೇನು, ಬಂಧನವಲ್ಲವೆ? ಮುತ್ತಿನ ಬಲೆಯಾದಡೇನು, ತೊಡರಲ್ಲವೆ? ನಚ್ಚುಮಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ ಭವ ಹಿಂಗುವುದೇ ಚೆನ್ನಮಲ್ಲಿಕಾರ್ಜುನ?  ೨ ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ! ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ  ೩ ಗುರುವಿನಿಂದ ಲಿಂಗವ ಕಂಡೆ, ಜಂಗಮವ ಕಂಡೆ ಗುರುವಿನಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ ಗುರುವಿನಿಂದ ನನ್ನ ನಾ ಕಂಡೆ, ಚೆನ್ನಮಲ್ಲಿಕಾರ್ಜುನ  ೪ ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಂಗಳಿಗಂಜಿದೊಡೆಂತಯ್ಯ? ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ? ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ? ಚೆನ್ನಮಲ್ಲಿಕಾಜುನದೇವ ಕೇಳಯ್ಯ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು  ೫ ಕಾಯ ಕರ್ರನೆ ಕುಂದಿದರೇನಯ್ಯ? ಕಾಯ ಮಿರ್ರನೆ ಮಿಂಚಿದರೇನಯ್ಯ? ಅಂತರಂಗ ಶುದ್ಧವಾದ ಬಳಿಕ ಚೆನ್ನಮಲ್ಲಿಕಾರ್ಜುನನನೊಲಿದ ಕಾಯ ಎಂತಾದಡೆಮಗೇನಯ್ಯ?  ೬ ನಾಳೆ ಬರುವುದು ನಮಗಿಂದೇ ಬರಲಿ ಇಂದು ಬರುವುದು ನಮಗೀಗಲೇ ಬರಲಿ ಆಗೀಗಲೆನ್ನದಿರೊ ಚೆನ್ನಮಲ್ಲಿಕಾರ್ಜುನ  ೭ ಮರವಿದ್ದು ಫಲವೇನು? ನೆಳಲಿಲ್ಲದನ್ನಕ! ಧನವಿದ್ದು ಫಲವೇನು ದಯವಿಲ...

ಬಸವಣ್ಣನವರ ವಚನಗಳು

ಇಮೇಜ್
ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ? ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ?  ಉಳ್ಳವರು ಶಿವಾಲಯವ ಮಾಡಿಹರು! ನಾನೇನ ಮಾಡುವೆ ? ಬಡವನಯ್ಯ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ! ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!  ಎನ್ನ ನಡೆಯೊಂದು ಪರಿ | ಎನ್ನ ನುಡಿಯೊಂದು ಪರಿ | ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ | ನುಡಿಗೆ ತಕ್ಕ ನಡೆಯ ಕಂಡರೆ ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |  ಎನಗಿಂತ ಕಿರಿಯರಿಲ್ಲ! ಶಿವಭಕ್ತರಿಗಿಂತ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ! ಕೂಡಲಸಂಗಮದೇವಾ ಎನಗಿದೇ ದಿಬ್ಯ.  ತಂದೆ ನೀನು, ತಾಯಿ ನೀನು; ಬಂಧು ನೀನು ಬಳಗ ನೀನು; ನೀನಲ್ಲದೆ ಮತ್ತಾರು ಇಲ್ಲವಯ್ಯ! ಕೂಡಲಸಂಗಮದೇವ, ಹಾಲಲದ್ದು ನೀರಲದ್ದು.  ವಚನದಲ್ಲಿ ನಾಮಾಮೃತ ತುಂಬಿ. ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಮನದಲ್ಲಿ ನಿಮ್ಮ ನೆನಹು ತುಂಬಿ; ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ; ಕೂಡಲಸಂಗಮದೇವ, ನಿಮ್ಮ ಚರಣಕಮಲದೊಳಗಾನು ತುಂಬಿ!  ಎನ್ನ ವಾಮ-ಕ್ಷೇಮ ನಿಮ್ಮದಯ್ಯ ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ ಎನ್ನ ಮಾನಾಪಮಾನವು ನಿಮ್ಮದಯ್ಯ ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ.  ಇವನಾರವ, ಇವನಾರವ, ಇವ...

ಸರ್ವಜ್ಞನ ವಚನಗಳು

ಇಮೇಜ್
ಬಲ್ಲವರು ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ ಎಲ್ಲರಿಗೆ ಇಲ್ಲ ಸರ್ವಜ್ಞ  ಗುರು ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು ಗುರುತೋರ್ವ ದೈವದೆಡೆಯನು ದೈವತಾ ಗುರುವ ತೋರುವನೇ? ಸರ್ವಜ್ಞ  ದಾನ ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ ಬರೆವರ ಕೂಡ ಹಗೆ ಬೇಡ, ಬಂಗಾರದ  ಎರವ ಬೇಡ ಸರ್ವಜ್ಞ ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು ಆಡಿ ಕೊಡುವವನು ಮಧ್ಯಮನು - ಅಧಮ ತಾನಾಡಿಯೂ ಕೊಡದವನು ಸರ್ವಜ್ಞ  ಜ್ಞಾನಿ   ಆನೆ ನೀರಾಟದಲಿ | ಮೀನ ಕಂಡಂಜುವುದೇ ಹೀನಮಾನವರ ಬಿರುನುಡಿಗೆ - ತತ್ವದ ಜ್ಞಾನಿ ಅಂಜುವನೆ ಸರ್ವಜ್ಞ  ಸ್ವರ್ಗ ಸಂಸಾರ ಬೆಚ್ಚನೆಯಾ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.  ಋಣ ಎಣ್ಣೆ ಬೆಣ್ಣೆಯ ಋಣವು, ಅನ್ನ ವಸ್ತ್ರದ ಋಣವು, ಹೊನ್ನು ಹೆಣ್ಣಿನ ಋಣವು, ತಿರಿದಾಕ್ಷಣದಿ ಮಣ್ಣು ಪಾಲೆಂದ ಸರ್ವಜ್ಞ..