ಪೋಸ್ಟ್‌ಗಳು

ಫೆಬ್ರವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶಿವತಾಂಡವ ಸ್ತೋತ್ರ ಉಪಯೋಗ (ಶಿವ ತಾಂಡವ ಸ್ತೋತ್ರದ ಮಹತ್ವಗಳು)

ಇಮೇಜ್
ಶಿವತಾಂಡವ ಸ್ತೋತ್ರ ಉಪಯೋಗ (ಶಿವ ತಾಂಡವ ಸ್ತೋತ್ರದ ಮಹತ್ವಗಳು) ಭಕ್ತರಿಗೆ ಶಿವ ಬೇಗನೆ ಒಲಿಯುವರು ಎಂದು ನಂಬಲಾಗಿದೆ. ಶಿವನಿಗೆ ಸಣ್ಣ ಪಾರ್ಥನೆ ಸಲ್ಲಿಸಿದರೂ ಒಲಿಯುತ್ತಾರೆ ಎನ್ನುವ ನಂಬಿಕೆಯು ಹಿಂದಿನಿಂದಲೂ ಇದೆ. ಈಶ್ವರ ದೇವರು ಒಳ್ಳೆಯ ಆರೋಗ್ಯ, ಕಾಯಿಲೆಗಳ ನಿವಾರಣೆ ಮಾಡುವರು. ಶಿವನ ಭಕ್ತರು ಮಂತ್ರ ಜಪಿಸುವ ಮೂಲಕ ಮತ್ತಷ್ಟು ಶ್ರೀಮಂತ ಹಾಗೂ ಆರೋಗ್ಯವಂತರಾಗಬಹುದು. ಹೀಗಾಗಿ ಹಿಂದೂ ಧರ್ಮದಲ್ಲಿ ಈಶ್ವರ ದೇವರಿಗೆ ಭಕ್ತರು ಹೆಚ್ಚು ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಶಿವನ ಒಲಿಸಿಕೊಳ್ಳಲು ಹಲವಾರು ಮಂತ್ರಗಳು ಇವೆ. ಇಲ್ಲೊಂದು ಸ್ತೋತ್ರವಾಗಿರುವ ಶಿವ ತಾಂಡವ ಸೋತ್ರವನ್ನು ಪಠಿಸುವುದರಿಂದ ಕೇವಲ ಈಶ್ವರ ದೇವರನ್ನು ಮಾತ್ರವಲ್ಲದೆ ಲಕ್ಷ್ಮೀ ದೇವಿಯನ್ನು ಕೂಡ ಒಲೈಸಿ ಕೊಳ್ಳಬಹುದು. ಶಿವ ತಾಂಡವ ಸ್ತೋತ್ರವು ರಾವನನಿಗೆ ಮೀಸಲಾಗಿದೆ. ಯಾಕೆಂದರೆ ಇದನ್ನು ರಚಿಸಿದವರು ಆತ ಮತ್ತು ಶಿವನನ್ನು ಒಲಿಸಿಕೊಳ್ಳಲು ಇದನ್ನು ಆತ ಜಪಿಸಿದ್ದ. ಸಂಪತ್ತು ಮತ್ತು ಐಶ್ವರ್ಯ ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಸಂಪತ್ತು ಮತ್ತು ಎಲ್ಲಾ ರೀತಿಯ ಐಷಾರಾಮವು ನಿಮ್ಮದಾಗುವುದು. ಲೌಕಿಕ ಜೀವನದಲ್ಲಿ ನಿಮ್ಮ ಯಾವುದೇ ಆಸೆಗಳು ಈಡೇರದೆ ಇರುವುದಿಲ್ಲ. ಅದಾಗ್ಯೂ, ನಿಮ್ಮ ಇಚ್ಛೆಗೆ ಅನುಗುಣವಾಗಿ ಇದನ್ನು ಜಪಿಸುವ ರೀತಿಯು ಭಿನ್ನವಾಗಿರುತ್ತದೆ. ಸಂಸಾರಿಗಳೀಗೆ ಇದು ಲಾಭಕಾರಿ ಶಿವ ತಾಂಡವ ಸ್ತೋತ್ರವನ್ನು ಜಪಿಸುವುದರಿಂದ ಕೌಟುಂಬಿಕ ಜೀವನದಲ್ಲಿ ಶಾಂತಿ ...

ವ್ಯವಹಾರಕ್ಕೆ ಉಪಯುಕ್ತವಾದ ಮತ್ತು ಮುಖ್ಯವಾದ ಕೆಲವು GST ನಿಯಮಗಳು ಮತ್ತು ಪ್ರಯೋಜನಗಳು:-

ಇಮೇಜ್
ವ್ಯವಹಾರಕ್ಕೆ ಉಪಯುಕ್ತವಾದ ಮತ್ತು ಮುಖ್ಯವಾದ ಕೆಲವು GST ನಿಯಮಗಳು ಮತ್ತು ಪ್ರಯೋಜನಗಳು:- ಸರಕು ಮತ್ತು ಸೇವಾ ತೆರಿಗೆ (GST) ಎಂದರೇನು? GST ಒಂದೇ ಏಕರೂಪದ ಪರೋಕ್ಷ ತೆರಿಗೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಪರೋಕ್ಷ ತೆರಿಗೆಗಳಾದ VAT, CENVAT ಮತ್ತು ಇತರವುಗಳನ್ನು ಬದಲಿಸಲು ಪರಿಚಯಿಸಲಾಗಿದೆ. GST ಎಲ್ಲಾ ರೀತಿಯ ವ್ಯವಹಾರಗಳಿಗೆ ಅನ್ವಯಿಸುತ್ತದೆ, ಸಣ್ಣ ಅಥವಾ ದೊಡ್ಡದು. ಇದು ದೇಶದ ಅತಿ ದೊಡ್ಡ ತೆರಿಗೆ ಸುಧಾರಣೆಗಳಲ್ಲಿ ಒಂದಾಗಿದೆ. ಇಡೀ ರಾಷ್ಟ್ರವು ಏಕೀಕೃತ ತೆರಿಗೆ ರಚನೆಯನ್ನು ಅನುಸರಿಸುತ್ತದೆ. ಹೆಸರೇ ಸೂಚಿಸುವಂತೆ, ಸರಕು ಮತ್ತು ಸೇವೆಗಳೆರಡಕ್ಕೂ GST ಅನ್ವಯಿಸುತ್ತದೆ ಮತ್ತು ಕೇಂದ್ರ ಮತ್ತು ರಾಜ್ಯ ಎರಡನ್ನೂ ಪರಸ್ಪರ ಸ್ವತಂತ್ರವಾಗಿ ಇರಿಸಲು ಭಾರತವು GST ಯ ಡ್ಯುಯಲ್ ಸಿಸ್ಟಮ್ ಅನ್ನು ಅನುಸರಿಸುತ್ತದೆ. ಜಿಎಸ್ಟಿ ಕೌನ್ಸಿಲ್ ಕೇಂದ್ರ ಹಣಕಾಸು ಸಚಿವರ ನೇತೃತ್ವದಲ್ಲಿರುತ್ತದೆ ಮತ್ತು ಇದು ವಿವಿಧ ರಾಜ್ಯಗಳ ಹಣಕಾಸು ಮಂತ್ರಿಗಳನ್ನು ಒಳಗೊಂಡಿರುತ್ತದೆ. GST ಯನ್ನು 5%, 12%, 18%, ಮತ್ತು 28% ರ ವಿವಿಧ ವರ್ಗಗಳ ಉತ್ಪನ್ನಗಳು ಮತ್ತು ಸೇವೆಗಳಿಗೆ ತೆರಿಗೆ ಸ್ಲ್ಯಾಬ್‌ಗಳೊಂದಿಗೆ ನಾಲ್ಕು ಹಂತದ ತೆರಿಗೆ ರಚನೆಯಾಗಿ ರೂಪಿಸಲಾಗುವುದು. ಅಕ್ಕಿ, ಗೋಧಿಯಂತಹ ಹೆಚ್ಚಿನ ಅಗತ್ಯ ವಸ್ತುಗಳಿಗೆ 0% ದರವನ್ನು ಇರಿಸಲಾಗುತ್ತದೆ. GST ಬದಲಿಸಿದ ಪರೋಕ್ಷ ತೆರಿಗೆಗಳು ಯಾವುವು? ಇಡೀ ರಾಷ್ಟ್ರಕ್ಕೆ ಏಕರೂಪದ ತೆರಿಗೆಯಾಗಿ ವಿನ್ಯಾಸಗೊಳ...

ಮಂಗಳ ಗೌರಿ ವ್ರತ, ವಿಧಾನ, ಮಂತ್ರ, ಅರ್ಥ, ಕಥೆ

ಇಮೇಜ್
ಮಂಗಳ ಗೌರಿ ವ್ರತ ಶ್ರಾವಣ ಮಾಸದ ಮಂಗಳ ಗೌರಿ ವ್ರತದಿಂದ ನಿಮ್ಮ ಬಾಳು ಹಸನಾಗುತ್ತೆ, ಶ್ರಾವಣ ಮಾಸ(Shravana Masa) ಬಂತೆಂದರೆ ಒಂದರ ಮೇಲೊಂದು ಹಬ್ಬಗಳು ಶುರುವಾಗುತ್ತವೆ. ಸೋಮವಾರದಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರಾವಣ ಸೋಮವಾರ ಮುಗಿಸಿದ ನಂತರ ಮಂಗಳವಾರ ಮಂಗಳ ಗೌರಿ ವ್ರತ(Mangala Gowri Vratha) ಮಾಡಲಾಗುತ್ತೆ. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳ ಗೌರಿ ವ್ರತ ಆಚರಿಸಲಾಗುತ್ತೆ. ಮದುವೆಯಾದ ಹೊಸ ಮದುಮಗಳು ಈ ವ್ರತ ಮಾಡುವುದರಿಂದ ಅನೇಕ ಫಲಗಳಿವೆ. ಮಂಗಳ ಗೌರಿ ವ್ರತವನ್ನು ಗಂಡನ ದೀರ್ಘಾಯುಷ್ಯ, ಸಂತೋಷದಾಯಕ ದಾಂಪತ್ಯ ಜೀವನಕ್ಕಾಗಿ ಆಚರಿಸಲಾಗುತ್ತೆ. ಅಷ್ಟೇ ಅಲ್ಲದೆ ಈ ದಿನ ಗೌರಿಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ, ಸಂತೋಷ, ಆರೋಗ್ಯ ವೃದ್ಧಿಯಾಗುತ್ತೆ. ಮಂಗಲ್ಯ ದೋಷ ನಿವಾರಣೆಗೂ ಈ ವ್ರತ ಮಾಡುವುದರಿಂದ ಉತ್ತಮ ಫಲಿತಾಂಶವಿದೆ. ಮದುವೆಯಾದ ಮೊದಲ 5 ವರ್ಷಗಳವರೆಗೆ ಮಹಿಳೆಯರು ಈ ವ್ರತವನ್ನು ಆಚರಿಸುತ್ತಾರೆ. ಈ ವರ್ಷ ಆಗಸ್ಟ್ 10, 17, 24 ಹಾಗೂ 31ರಂದು ಶ್ರಾವಣ ಮಂಗಳವಾರ ಬಂದಿದೆ. ಮಂಗಳ ಗೌರಿ ಪೂಜಾ ವಿಧಿ ಮಹಿಳೆಯರು ಗೌರಿ ಆವಾಹನ ಮಂತ್ರ, ಗಣಪತಿ ಆವಾಹನ ಮಂತ್ರ ಮತ್ತು ಇನ್ನು ಹಲವು ದೇವರುಗಳ ಆವಾಹನ ಮಂತ್ರ ಪಠಿಸಬೇಕು. ಮಹಿಳೆಯರು ಸಾಂಪ್ರಧಾಯಿಕ ಉಡುಗೆ ತೊಟ್ಟು, ಹೆಣೆಗೆ ಕುಂಕುಮ, ಕೆನ್ನೆಗೆ ಅರಶಿಣ, ಕಪ್ಪು ಬಳೆ ಹಾಗೂ ತಲೆಗೆ ಹೂ ಮುಡಿದು ದೇವರಿಗೆ ಮೆಚ್ಚಿಗೆಯಾಗುವಂತೆ ಅಲಂಕೃತರಾಗಬೇಕು. ದೇವರಿಗೆ ...

ರಾವಣನ ಕುರಿತು ಸಂಪೂರ್ಣ ಪ್ರಶ್ನೋತ್ತರಗಳು

ಇಮೇಜ್
1) ರಾಣನಿಗಿಂತಲು ಮೊದಲು ಲಂಕೆಯನ್ನು ಆಳುತ್ತಿದ್ದ ರಾಜ ಯಾರು? ಉತ್ತರ : ಕುಭೆರ 2) ವಿಶ್ರವಸು ಹಾಗು ಕೈಕಸಿಯ ಮಗ ಯಾರು? ಉತ್ತರ : ರಾವಣ 3) ಕೈಕಸಿ ಯಾರ ಮಗಳು? ಉತ್ತರ : ಸುಮಾಲಿ ಎಂಬ ರಾಕ್ಷಸನ ಮಗಳು 4) ಸುಮಾಲಿಯ ಸೋದರರು ಎಷ್ಟು ಮಂದಿ? ಉತ್ತರ : ಇಬ್ಬರು ( ಮಾಲಿ, ಮಾಲ್ಯವಂತ) 5) ಸುಮಾಲಿ, ಮಾಲಿ, ಹಾಗು ಮಾಲ್ಯವಂತರ ತಂದೆ ಯಾರು? ಉತ್ತರ: ಸುಖೇಶನೆಂಬ ರಾಕ್ಷಸ 6) ರಾವಣನ ಮೂಲ ಹೆಸರೇನು? ಉತ್ತರ : ದಶಕಂಠ/ ದಶಾನನ 7) ಬ್ರಹ್ಮದೇವನಲ್ಲಿ ರಾವಣನು ಕೇಳಿದ ವರವೇನು? ಉತ್ತರ: ತನಗೆ ಸಾವು ಬರಬಾರದು ಎಂದು 8) ಸಾವೇ ಬರಬಾರದೆಂಬ ವರವನ್ನು ಕೇಳು ಎಂದು ರಾವಣನಿಗೆ ಹೇಳಿಕೊಟ್ಟಿದ್ದು ಯಾರು? ಉತ್ತರ: ಅವನ ತಾಯಿ ಕೈಕಸಿ ಹಾಗೂ ಅಜ್ಜ ಸುಮಾಲಿ 9) ರಾವಣ ಕೇಳಿದವರ ದೊರೆಯಿತೇ? ಉತ್ತರ : ಇಲ್ಲ 10) ರಾವಣನು ಬದಲಿಯಾಗಿ ಕೇಳಿದ ವರ ಯಾವುದು? ಉತ್ತರ : ದೇವತೆಗಳು ರಾಕ್ಷಸರು ಯಕ್ಷರು ಗಂಧರ್ವರು ಪ್ರಾಣಿ-ಪಕ್ಷಿಗಳಿಂದ ನನಗೆ ಸಾವು ಬರಬಾರದೆಂದು ಕೇಳಿದ 11) ರಾವಣನು ತನ್ನ ಬೇಡಿಕೆಯಿಂದ ಯಾರನ್ನು ಹೊರಗಿಟ್ಟಿದ್ದ? ಉತ್ತರ : ಮನುಷ್ಯ 12) ರಾವಣನು ಮನುಷ್ಯರಿಂದ ಸಾವು ಬರಬಾರದೆಂದು ಏಕೆ ಕೇಳಲಿಲ್ಲ? ಉತ್ತರ : ಮನುಷ್ಯರಿಗೆ ನನ್ನನ್ನು ಸಂಹರಿಸುವಸ್ಟು ಶಕ್ತಿ ಇರುವುದಿಲ್ಲವೆಂದು ಮನುಷ್ಯರನ್ನು ಕಡೆಗಣಿಸಿದ 13) ಕುಂಬಕರ್ಣ ಬ್ರಹ್ಮದೇವನಲ್ಲಿ ಕೇಳಿದ ವರವೇನು? ಉತ್ತರ : ಚೆನ್ನಾಗಿ ನಿದ್ರೆ ಬೇಕು ತುಂಬಾ ನಿದ್ರೆ ಬೇಕು ಎಂದು 14) ಕುಂಭಕರ್ಣನಿಗೆ ನಿದ...

ಮಂಗಳಾರತಿ ಮತ್ತು ತೀರ್ಥ ಇವುಗಳ ವಿಶೇಷತೆ

ಇಮೇಜ್
ಮಂಗಳಾರತಿ ಮತ್ತು ತೀರ್ಥ.... ಪ್ರಸಾದ ಇಲ್ವೆ....?!! ಎಂದು ಮಾತ್ರ ಕೇಳ್ಬೇಡಿ....... ಇಲ್ಲಿ ಮೇಲಿನೆರೆಡು ವಿಚಾರಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತಿದ್ದೇನೆ..... ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿಯಿತ್ತಾಗ ಮಂಗಳಾರತಿ ಮತ್ತು ತೀರ್ಥ ತೆಗೆದುಕೊಳ್ಳದೆ ಬರುವವರು ವಿರಳ. ಸುಮ್ಮನೆ ಕೈನೀಡಿ ತೆಗೆದುಕೊಳ್ಳುವವರೂ ಇದ್ದೇವೆ. ಹಾಗಾದರೆ ಅವುಗಳನ್ನೇಕೆ ತೆಗೆದುಕೊಳ್ಳಬೇಕು ? ಮಂಗಳಾರತಿಯೇ ಮೊದಲೇಕೆ ? ತೀರ್ಥ ನಂತರವೇಕೆ ? ಈ ಪ್ರಶ್ನೆಗಳಿಗೆ ಇಲ್ಲಿದೆ ನನ್ನದೊಂದು ವಿಚಾರ... ದೇವರ ಶಿಲಾ ಮೂರ್ತಿಗೆ (ಅಥವಾ ಲಿಂಗಕ್ಕೆ) ಜಲಾಭಿಷೇಕ ಮಾಡುವುದು ನಿತ್ಯವಿಧಿಗಳಲ್ಲಿ ಒಂದು. ಅಂತಹ ದೇವರ ಮೂರ್ತಿ ಅಥವಾ ಲಿಂಗವನ್ನು ನಿರ್ದಿಷ್ಟ ಶಿಲೆಗಳಿಂದ ಮಾಡಿರುತ್ತಾರೆ. ಸಾಮಾನ್ಯವಾಗಿ ’ಸಾಲಿಗ್ರಾಮ ಶಿಲೆ’ , ’ಕೃಷ್ಣ ಶಿಲೆ’ ಹಾಗೂ ’ನವರತ್ನ ಶಿಲೆ’ ಗಳಿಂದ ಕೆತ್ತಲ್ಪಟ್ಟ ಮೂರ್ತಿಗಳಿರುತ್ತವೆ. (ಗ್ರಾನೈಟ್, ಬಳಪದ ಕಲ್ಲು, ಇನ್ನಿತರ ಶಿಲೆಗಳು ಶಾಸ್ತ್ರೋಕ್ತ ರೀತಿ ಪೂಜಾರ್ಹವಲ್ಲ!.) ಈ ಶಿಲೆಗಳು ಅಪೂರ್ವವಾದ ಶಕ್ತಿಯನ್ನು ಹೊಂದಿರುವುದರ ಜೊತೆಗೆ ಸಾಕಷ್ಟು ಖನಿಜಾಂಶಗಳನ್ನು ಒಳಗೊಂಡಿರುತ್ತದೆ. ಅಂತಹ ಶಿಲೆಯ ಮೇಲೆ ಬಿದ್ದ ನೀರು ತನ್ನ ಜೊತೆ ಎಲ್ಲಾ ಸತ್ವಗುಣಗಳನ್ನು ತಂದಿರುತ್ತದೆ. ಅಂತಹ ನೀರನ್ನು ಒಂದು ಪಾತ್ರೆಯಲ್ಲಿ ಹಿಡಿದಿಡಲಾಗುತ್ತದೆ. (ಇಲ್ಲಿ ಹಾಲು, ಮೊಸರು, ಇತ್ಯಾದಿಗಳಿಂದ ಕೂಡಿದ ಪಂಚಾಮೃತವನ್ನು ಪ್ರಸ್ತಾಪಿಸುವುದಿಲ್ಲ. ಕಾರಣ ಅದು ಶುಧ್ಧ ತೀರ್...

ಪುರಾಣಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ?

ಇಮೇಜ್
ಪುರಾಣಗಳಲ್ಲಿ ಪ್ರತ್ಯಕ್ಷವಾಗುವುದು, ಶಾಪಕೊಡುವುದು, ಅಶರೀರವಾಣಿ ಮುಂತಾಗಿ ಕೇಳುತ್ತೇವೆ ಇದು ಸತ್ಯವೇ? ನಮ್ಮ ಪುರಾಣ ಕಥೆಗಳಲ್ಲಿ ಬರುವ ಅದೃಷ್ಯರಾದರು, ಪ್ರತ್ಯಕ್ಷರಾದರು, ಅಶರೀರವಾಣಿ ಕೇಳಿಸಿತು, ಶಾಪಕೊಟ್ಟರು , ಶಾಪದಿಂದ ಅಹಲ್ಯೆ ಕಲ್ಲಾದಳು, ಯಜ್ಞದಿಂದ ಮಳೆ ಭರಿಸಿದರು, ಕೋಪದಿಂದ ನೋಡಿದಾಗ ಭಸ್ಮವಾದರು, ತಪಸ್ವಿಗಳು ಆಡಿದ ಮಾತು ಅಥವಾ ಕೊಟ್ಟ ಶಾಪ ಎಂದಿಗೂ ಸುಳ್ಳಾಗಲಾರದು. ಎಂಬೆಲ್ಲಾ ಘಟನೆ ಗಳನ್ನು ನೊಡುತ್ತೇವೆ ಇದು ಸುಳ್ಳು ಎನ್ನುವಂತಿಲ್ಲ ಇಂದಿಗೂ ಸಾಧನೆ ಮಾಡಿದರೆ ಸಾಧಕರ ಮಾತಿನಂತೆಯೇ ಪ್ರಕೃತಿ ವರ್ತಿಸುವುದು ಸಾಧ್ಯವಿದೆ. ಇಂತಹ ಪ್ರಕೃತಿಯನ್ನು ದೈವಿಕ ಶಕ್ತಿಯನ್ನು ಒಲಿಸಿಕೊಳ್ಳುವ ರಹಸ್ಯವನ್ನು ಮಂತ್ರಗಳಲ್ಲಿ ಹುದುಗಿಸಿ ನಮ್ಮ ಹಿರಿಯರು ನಮಗೆ ನೀಡಿದ್ದಾರೆ. ಇಂತಹ ಮಂತ್ರಸಿದ್ದಿಯಿಂದ ನಾವುಕೂಡಾ ಅತೀಂದ್ರಯವಾದುದನ್ನು ಸಾಧಿಸಬಹುದಾಗಿದೆ. ಕುಳಿತಲ್ಲಿಂದಲೇ ವಿಶ್ವವನ್ನು ನೋಡಬಹುದಾಗಿದೆ. ನೆನೆಸಿದಲ್ಲಿ ಕ್ಷಣ ಮಾತ್ರದಲ್ಲಿ ನಾವು ಚ್ಚಿಸಿದ ಸ್ಥಳವನ್ನು ತಲುಪುವುದೂ ಸಾಧ್ಯವಿದೆ. ಹಿಂದೂಗಳಲ್ಲಿ ವಿಶೇಷ ವಿದ್ಯೆಗಳು ಭಾರತದಲ್ಲಿ ಕಲಿಸಲ್ಪಡುತ್ತಿದ್ದವು. ನಮ್ಮ ಪರಂಪರೆಯಲ್ಲಿ 64 ವಿದ್ಯೆಗಳಿವೆ. ಹಾಗೆಯೇ ಅಣಿಮಾ, ಲಘಿಮಾ, ಮಹಿಮಾ, ಗರಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶಿತ್ವ, ವಶಿತ್ವ ಎಂಬುದಾಗಿ ಅಷ್ಠ ಸಿದ್ದಿಗಳೂ ಕೂಡಾ ಉಲ್ಲೇಖಿಸಲ್ಪಟ್ಟಿದೆ. ಆದರೆ ಇಂದು ಸಾಧಕರ ಕೊರತೆ ಇದೆ ಮತ್ತು ವಿದ್ಯೆಯನ್ನು ದರುಪಯೋಗ ಪಡಿಸಿಕ...

ಹೋಮ ಮಾಡುವುದರಿಂದ ಯಾವೆಲ್ಲಾ ಆರೋಗ್ಯದ ಸಮಸ್ಯೆಗಳು ದೂರಾಗುತ್ತದೆ ನೋಡಿ

ಇಮೇಜ್
ಇದು ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಹೋಮ ಮಾಡುವುದರಿಂದ ಯಾವೆಲ್ಲಾ ಆರೋಗ್ಯದ ಸಮಸ್ಯೆಗಳು ದೂರಾಗುತ್ತದೆ ನೋಡಿ: ಹಿಂದೂ ಧರ್ಮದಲ್ಲಿ ಹೋಮ ಹವನಾದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಪ್ರತಿ ಶುಭ ಕಾರ್ಯಕ್ರಮಗಳಲ್ಲೂ ಹೋಮ ಕಡ್ಡಾಯವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ ಹೋಮವನ್ನು ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ ಎಂದು ಹೇಳಲಾಗಿದೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಹೋಮ ಮಾಡುವುದರಿಂದ ಪರಿಸರವು ಕೂಡ ಶುದ್ಧಿಯಾಗುತ್ತದೆಯಂತೆ. ಹೋಮ ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯು ಸಾಕಷ್ಟು ಪ್ರಯೋಜನಗಳನ್ನು ಪಡೆದಿದೆ. ಹೋಮ ಮಾಡುವುದರಿಂದಾಗುವ ಪ್ರಯೋಜನಗಳಾವುವು ಗೊತ್ತಾ..? ರೋಗದಿಂದ ಮುಕ್ತಗೊಳಿಸುತ್ತದೆ ಹೋಮ ಮಾಡುವುದರಿಂದ ಯಾವುದೇ ರೀತಿಯ ಮಾರಕ ಮತ್ತು ಅಪಾಯಕಾರಿ ರೋಗವನ್ನು ತೊಡೆದು ಹಾಕಬಹುದಾಗಿದೆ. ಹೋಮದ ಸಮಯದಲ್ಲಿ ಆ ಹೊಗೆಯನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ. ಹೋಮದ ಸಮಯದಲ್ಲಿ ಹೊಗೆ ದೇಹದೊಳಗೆ ಹೋಗಿ ಟೈಫಾಯ್ಡ್‌ನಂತಹ ತೀವ್ರ ಮತ್ತು ಮಾರಣಾಂತಿಕ ಕಾಯಿಲೆಯನ್ನು ತರುವ ಬ್ಯಾಕ್ಟೇರಿಯಾಗಳನ್ನು ತೆಗೆದು ಹಾಕುತ್ತದೆ. ಇದಲ್ಲದೇ ಸಂಪೂರ್ಣ ದೇಹವು ಶುದ್ಧವಾಗುತ್ತದೆ. ಆದರೆ ಮೆದುಳು, ಶ್ವಾಸಕೋಶ ಮತ್ತು ಉಸಿರಾಟದ ಸಮಸ್ಯೆಯಿರುವವರು ಹೋಮದಿಂದ ದೂರವಿರಬೇಕು. ನಕಾರಾತ್ಮಕ ಶಕ್ತಿಯನ್ನು ನಾಶಪಡಿಸ...

ಶ್ರೀ ಗಣೇಶ ದ್ವಾದಶನಾಮ ಸ್ತೋತ್ರ

ಇಮೇಜ್
ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ | ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೆ || ೧ || ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ| ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಂ|| ೨ || ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ | ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಂ || ೩ || ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಂ| ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ|| ೪ || ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ | ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪ್ರಭೋ || ೫ || ವಿದ್ಯಾರ್ಥಿ ಲಭತೆ ವಿದ್ಯಾಂ ಧನಾರ್ಥೀ ಲಭತೆ ಧನಂ | ಪುತ್ರಾರ್ಥಿ ಲಭತೆ ಪುತ್ರಾನ್ ಮೋಕ್ಷಾರ್ಥಿ ಲಭತೆ ಗತಿಂ|| ೬ || ಜಪೇತ್ ಗಣಪತಿಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ | ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಂಶಯಃ || ೭ || ಅಷ್ಟೆಭ್ಯೊ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ | ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ || ೮ ||

ಸಂಪೂರ್ಣ ರಾಮಾಯಣ ಪ್ರಶ್ನೋತ್ತರಗಳು

ಇಮೇಜ್
1) ರಾಮಾಯಣ ರಚಿಸಿದವರು ಯಾರು? ಉತ್ತರ: ವಾಲ್ಮೀಕಿ ಮಹರ್ಷಿಗಳು 2) ವಾಲ್ಮಿಕಿ ಯಾವ ವಂಶಜರು? ಉತ್ತರ: ಭೃಗುವಂಶ 3) ವಾಲ್ಮಿಕಿಯ ತಂದೆಯ ಹೆಸರೇನು? ಉತ್ತರ: ಪುಚೇತನ ಮಹರ್ಷಿಗಳು 4) ಸಂಸ್ಕೃದಲ್ಲಿ ವಲ್ಮಿಕಿ ಎಂದರೇನು? ಉತ್ತರ: ಹುತ್ತ 5) ರಾಮಾಯಣದ ಒಟ್ಟು ಎಷ್ಟು ಕಾಂಡಗಳು? ಉತ್ತರ: ೦೮ 6)ರಾಮಾಯಣದ ಕಾಂಡಗಳು ಯಾವುವು? ಉತ್ತರ: ಬಾಲಾಕಾಂಡ, ಆಯೋಧ್ಯಕಾಂಡ, ಅರಣ್ಯಕಾಂಡ,ಕಿಷ್ಕಿಂಧಾಕಾಂಡ, ಸುಂದರಕಾಂಡ, ಲಂಕಾಕಾಂಡ, ಉತ್ತರಕಾಂಡ, ಲವ-ಕುಶ ಕಾಂಡ, 7) ಕನ್ನಡದಲ್ಲಿ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ರಚಿಸಿದವರು ಯಾರು? ಉತ್ತರ : ರಾಷ್ಟ್ರಕವಿ ಕುವೆಂಪು 8) ತಮಿಳಿನಲ್ಲಿ ರಾಮಾಯಣವನ್ನು ರಚಿಸಿದವರು ಯಾರು ? ಉತ್ತರ : ಕಂಬನ್ 9) ಲಂಕಾಕಂದಕ್ಕಿರುವ ಮತ್ತೊಂದು ಹೆಸರೇನು? ಉತ್ತರ : ಯುದ್ದಕಾಂಡ 10) ರಾಮಾಯಣ ಯಾವ ಯುಗಕ್ಕೆ ಸೇರಿದ್ದು? ಉತ್ತರ : ತ್ರೇತಾಯುಗ 11) ರಾಮನ ವಂಶ ಯಾವುದು ? ಉತ್ತರ : ಸೂರ್ಯವಂಶ 12) ಸೂರ್ಯವಂಶದ ಮೊದಲ ರಾಜನ ಹೆಸರು ? ಉತ್ತರ : ಇಕ್ಷ್ವಾಕು 13) ಇಕ್ಷ್ವಾಕುವಿನ ತಂದೆ ಯಾರು ? ಉತ್ತರ : ಸೂರ್ಯದೇವ 15) ಸೂರ್ಯವಂಶಕ್ಕಿರುವ ಮತ್ತೊಂದು ಹೆಸರೇನು ? ಉತ್ತರ : ರಘುವಂಶ 16) ಸೂರ್ಯವಂಶದ ಮತ್ತೊಬ್ಬ ಕಿರ್ತಿವಂತ ರಾಜ ಯಾರು ? ಉತ್ತರ : ಸತ್ಯ ಹರಿಶ್ಚಂದ್ರ 17) ದಶರಥನ ಮೂವರು ಪಟ್ಟ ಮಹಿಷಿಯರು ಯಾರು ? ಉತ್ತರ : ಕೌಸಲ್ಯಾ, ಸುಮಿತ್ರೆ, ಕೈಕೆಯಿ 18) ದಶರಥ ಮಹಾರಜನ ತಂದೆ ಯಾರು ? ಉತ್ತರ : ಅಜ ಮಹಾರಾಜ 19) ಕೌಶಲ್ಯೆ...

ದೇವರ ಪೂಜೆಯಲ್ಲಿ ಪತ್ರೆಗಳ ಪಾತ್ರ

ಇಮೇಜ್
ಸಾಮಾನ್ಯವಾಗಿ ನಾವು ದೇವರ ಪೂಜೆಗೆ ಪತ್ರೆಗಳನ್ನು ಬಳಸುತ್ತೇವೆ. ಯಾವ ಪತ್ರೆಯಿಂದ ಪೂಜೆ ಮಾಡಿದರೆ ಶುಭ ದೊರಕುತ್ತದೆ ಎಂಬ ಬಗ್ಗೆ ಒಂದು ಅವಲೋಕನ ಇಲ್ಲಿದೆ. ದೇವರ ಕಾರ್ಯಗಳಿಗೆಲ್ಲ ವಿವಿಧ ಬಗೆಯ ಪತ್ರೆಗಳು ಬೇಕೇಬೇಕು. ಅದರಲ್ಲೂ ಒಬ್ಬೊಬ್ಬ ದೇವರಿಗೂ ಒಂದೊಂದು ಪತ್ರೆಯು ವಿಶೇಷ. ಈ ಪತ್ರೆಗಳು ಮತ್ತು ಅವುಗಳನ್ನರ್ಪಿಸಿ ಪೂಜಿಸಿದರೆ ಸಿಗುವ ವಿಶೇಷ ಫಲಾಫಲಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು. ಗರಿಕೆ ಪತ್ರೆ: ಗರಿಕೆ ಪತ್ರೆಯನ್ನು ಮೊದಲು ಪೂಜಿತನಾದ ಮಹಾಗಣಪತಿಗೆ ಸಲ್ಲಿಸುತ್ತಾರೆ. ಪ್ರತಿದಿನವೂ ಗರಿಕೆಯನ್ನು ಗಂಧದಲ್ಲಿ ಅದ್ದಿ ಪೂಜೆ ಮಾಡಿದರೆ ಸಕಲ ಇಷ್ಟ ಕಾರ್ಯಗಳು ನೆರವೇರುತ್ತವೆ. ಶನಿದೇವರಿಗೆ ಪಂಚಮಶನಿಕಾಟ, ಅಷ್ಟಮಶನಿಕಾಟ, ಏಳೂವರೆ ವರ್ಷದ ಶನಿಕಾಟವಿದ್ದವರು ಗರಿಕೆಯನ್ನು ಶನೇಶ್ವರನಿಗೆ ಅರ್ಪಿಸಿದರೆ ಆತನಿಂದ ಆಗುವ ಕಷ್ಟಗಳ ಬಲ ಕಡಿಮೆಯಾಗುತ್ತದೆ. ಆಂಜನೇಯ ಸ್ವಾಮಿಗೆ ಪ್ರತಿದಿನವೂ ಗರಿಕೆಯಿಂದ ಪೂಜೆ ಮಾಡಿದರೆ ಸಂಕಲ್ಪ ಮಾಡಿಕೊಂಡ ಕೆಲಸಗಳು ನೆರವೇರುತ್ತವೆ. ಮಹಾಗಣಪತಿಗೆ ಗರಿಕೆಯ ಹಾರವನ್ನು ಸಮರ್ಪಿಸಿದರೆ ಸಕಲ ಕಾರ್ಯದಲ್ಲಿ ಜಯ ಲಭಿಸಿ ಇಷ್ಟಾರ್ಥಸಿದ್ಧಿ ದೊರಕುತ್ತದೆ. ಪ್ರಾಣಿಗಳಿಗೆ ಸರಿಯಾಗಿ ಜೀರ್ಣವಾಗದೆ ಇದ್ದಾಗ ಗರಿಕೆಯನ್ನು ತಿಂದು ಆರೋಗ್ಯ ಸರಿಪಡಿಸಿಕೊಳ್ಳುತ್ತವೆ. ಹಾಗೆಯೇ ಮನುಷ್ಯನೂ ಗರಿಕೆಯ ರಸವನ್ನು ಕುಡಿದರೆ ಆರೋಗ್ಯ ಭಾಗ್ಯ ಲಭಿಸುತ್ತದೆ ಮರಗ ಪತ್ರೆ: ಯಾರಿಗೆ ಬಹಳ ವರ್ಷಗಳಾದರೂ ಅವರ ಕೋರಿಕೆ ನೆರವೇರುವುದಿಲ್ಲ, ಯ...